ರಾಷ್ಟ್ರ ಸುದ್ದಿ

ಕೇರಳದಲ್ಲಿ ಮೋದಿ ಹತ್ಯೆಗೆ ಸಂಚು ಹೂಡಲಾಗಿತ್ತೇ?

ಕೊಚ್ಚಿ(ಕೇರಳ); ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿಯವರು ಕೇರಳದ ಕೊಚ್ಚಿಯ ಮೆಟ್ರೋ ಉದ್ಘಾಟನೆ ಮಾಡಿದರು. ಆಗ ಕೇರಳದ ಕೊಚ್ಚಿಯಲ್ಲಿದ್ದ ನರೇಂದ್ರ ಮೋದಿಯವರನ್ನು ಹತ್ಯೆಗೈಯಲು ಭಯೋತ್ಪಾದಕ ತಂಡವೊಂದು ಸಕಲ ಸಿದ್ಧತೆ ನಡೆಸಿಕೊಂಡಿತ್ತು ಎಂಬ ಆಘಾತಕಾರಿ ಸುದ್ದಿಯನ್ನು ಗುಪ್ತಚರ ದಳವೊಂದು ಬಯಲಿಗೆಳೆದಿದೆ.

ಈ ಮಾಹಿತಿಯನ್ನು ಕೇರಳ ಪೊಲೀಸರೂ ಸಹ ಖಚಿತ ಪಡಿಸಿದ್ದು, ಅಂದು ಮೋದಿಯಿದ್ದ ಸ್ಥಳದ ಬಳಿಯ ಪುದುವ್ಯಾಪೀನ್ ಎಂಬ ಸ್ಥಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದನ್ನು ತಡೆಯುವಲ್ಲಿ ಅಲ್ಲಿನ ಪೊಲೀಸರು ಯಶಸ್ವಿಯಾಗಿದ್ದರು.

ಈ ಪ್ರತಿಭಟನೆಯ ಗುಂಪಿನಲ್ಲೇ ಭಯೋತ್ಪಾದಕರ ತಂಡವೊಂದೂ ಇತ್ತು ಎಂದು ಇಲ್ಲಿನ ಡೆಪ್ಯುಟಿ ಜನರಲ್ ಆಫ್ ಪೊಲೀಸ್ ಟಿ.ಪಿ.ಸೇನುಕುಮಾರ್ ತಿಳಿಸಿದ್ದಾರೆ, ಇನ್ನೂ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ಸಂಚು ಯಾವ ಭಯೋತ್ಪಾದಕ ಗುಂಪು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

1 Comment

Leave a Comment