ರಾಷ್ಟ್ರ

ಕೇರಳದ ದೇವಾಲಯದಲ್ಲಿ ಮನುಷ್ಯರ ರಕ್ತ ಅರ್ಪಣೆ

ತಿರುವನಂತಪುರ: ದೇವಿಯೊಡೆ ಶ್ರೀವಿದ್ವಾರಿ ವೈದ್ಯನಾಥನ್ ದೇವಾಲಯದಲ್ಲಿ ದೇವತೆಗೆ ಮನುಷ್ಯರ ರಕ್ತ ನೀಡಿ ಪೂಜೆ ಮಾಡುವ ಪದ್ಧತಿಯ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ  ಈ ಪದ್ಧತಿಯನ್ನು ನಿಲ್ಲಿಸುವ ಸಲ್ಲುವಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದರಿಂದ ದೇವಾಯಲದ ಆಡಳಿತ ಮಂಡಳಿ ದೇವತೆಯನ್ನು ಸಂತೋಷಪಡಿಸಲು ಮಾಡುತ್ತಿದ್ದ  ಈ ಪೂಜೆಯನ್ನು ಕೈ ಬಿಡಲು ನಿರ್ಧರಿಸಿದೆ.

ಮಾರ್ಚ್ 12 ರಂದು ನಡೆಯುವ “ಕಾಳಿಯೂಟು ಹಬ್ಬ” 10 ದಿನಗಳವರೆಗೆ ನಡೆಯಲಿದ್ದು, ಈ ಹಬ್ಬದಲ್ಲಿ ಭಕ್ತರು ಸಿರಿಂಜ್ಗಳ ಮೂಲಕ ರಕ್ತ ತೆಗೆದು ದೇವಿಯ ಪೂಜೆಗೆ ಅರ್ಪಿಸುತ್ತಿದ್ದರು.

ಮುನುಷ್ಯರ ರಕ್ತ ಅರ್ಪಿಸಿ ಮಾಡುವ ಮಾಹಾಘೋರ ಕಾಳಿ ಯಜ್ಞ”ದಿಂದ ಹಲವು ಕಾಯಿಲೆಗಳು ಗುಣವಾಗುತ್ತೆವೆ.ಎಂಬ ನಂಬಿಕೆ ಭಕ್ತರಲ್ಲಿ ಇದೆ. ಎಂಬುದಾಗಿ ಈ ಯಜ್ಞದ ಮಹತ್ವದ ಬಗ್ಗೆ ತಂತ್ರಿ ಹೇಳುತ್ತಾರೆ. ಯಜ್ಞದ ಬಗ್ಗೆ ಮಾತನಾಡುತ್ತಾ ಇದೊಂದು ಪುರಾತನ ಪದ್ಧತಿಯಾಗಿದೆ.ಸರ್ಕಾರ ಹಾಗೂ ಸಾರ್ವಜನಿಕರು ಇದರ ಬಗ್ಗೆ ತಪ್ಪಾದ ಮಾಹಿತಿ ನೀಡುತ್ತಿದ್ದಾರೆ.

ಈ ಯಜ್ಞದ ಹಿಂದೆ ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ.ಭಕ್ತರೇ ಯಜ್ಞಕ್ಕಾಗಿ ರಕ್ತವನ್ನು ಸಂಗ್ರಹಿಸಲು ಕೋರಿದ್ದರು.ಯಜ್ಞದ ಬೆಂಕಿ ತಿಂಬಾ ಪವಿತ್ರವಾದದು.ಅದಕ್ಕೆ ರಕ್ತವನ್ನು ಹಾಕಿದರೆ ಅದು ಶಕ್ತಿಯನ್ನು ಹೀರಿಕೂಳ್ಳುತ್ತದೆ.ಅದ್ದರಿಂದಲೇ ಹಿಂದೊ ಪುರಾಣದಲ್ಲಿ ಈ ರೀತಿಯ ಪದ್ಧತಿಯ ಬಗ್ಗೆ ಹಲವಾರು ಉಲ್ಲೇಖಗಳಿವೆ.ಇದನ್ನು ವೈಜ್ಞಾನಿಕ ವಿವರಣೆ ಕೇಳಬಹುದಿತ್ತು”ಎಂದು ಹೇಳಿದ್ದಾರೆ.

ಇಲ್ಲಿ ರಕ್ತ ಪರೀಕ್ಷಗೆ ನೀಡುವುದಕ್ಕಿಂತ ಕಡಿಮೆ ರಕ್ತವನ್ನು ಸಂಗ್ರಹಿಸುತ್ತೆವೆ.ನಾವು ರಕ್ತ ಕೊಡಿ ಅಥವಾ ಪೂಜೆಯಲ್ಲಿ ಭಾಗವಹಿಸಿ ಅಂತ ಯಾರನ್ನು ಒತ್ತಾಯಿಸುವುದಿಲ್ಲ. ಆದರೆ ಸರ್ಕಾರದ  ಈ ನಿರ್ಧಾರದಿಂದಾಗಿ ಈ ಯಜ್ಞ ನೆಡೆಯಲು ಸರ್ಕಾರದ ಅನುಮತಿ ಪಡೆಯಲು ಭಕ್ತರಲ್ಲಿ ಹೇಳಿದ್ದೇವೆ ಎಂದು ಸಿದ್ದಗೋಷ್ಠಿಯಲ್ಲಿ ತಿಳಿಸಿದರು.

About the author

ಕನ್ನಡ ಟುಡೆ

Leave a Comment