ರಾಷ್ಟ್ರ ಸುದ್ದಿ

ಕೇರಳ ಶಾಸನಸಭೆಯಲ್ಲಿ ಕನ್ನಡ ಕಂಪು ಪಸರಿಸಿದ್ದ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ವಿಧಿವಶ

ಕಾಸರಗೊಡು: ಮಂಜೇಶ್ವರ ಶಾಸಕ  ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಲೀಡರ್ ಪಿ.ಬಿ. ಅಬ್ದುಲ್ ರಜಾಕ್ (63) ವಿಧಿವಶರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಇಂದು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಸುಕಿನ ಜಾಲವ 5 ಗಂಟೆಗೆ ಕೊನೆಯುಸಿರೆಳಿದ್ದಾರೆ. ಶವವನ್ನು ಕಾಸರಗೋಡಿನ ನೈಮರ್ಮೂಲಗೆ ತೆಗೆದುಕೊಂಡು ಹೋಗಲಾಗಿದೆ, ಅಬ್ದುಲ್ ರಜಾಕ್ ಅವರು 2016ರಲ್ಲಿ ಎರಡನೇ ಬಾರಿ ಶಾಸಕರಾಗಿದ್ದರು. ಜೂನ್ 2, 2016ರಲ್ಲಿ ಕೇರಳ ವಿಧಾನಸಭೆ ಚುನಾವಣೆಯಲ್ಲಿ  ಅಬ್ದುಲ್ ರಜಾಕ್ 89 ಮತಗಳಿಂದ ಅಚ್ಚರಿಯ ಗೆಲುವು ಸಾಧಿಸಿದ್ದರು.ಬಿಜೆಪಿಯ ಸುರೇಂದ್ರನ್ ಅವರನ್ನು 89 ಮತಗಳಿಂದ ಸೋಲಿಸಿದ್ದರು. ಕೇರಳ ವಿಧಾನ ಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡದ ಕಂಪನ್ನು ಸಾರಿದ್ದರು. 2011ರಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು.

About the author

ಕನ್ನಡ ಟುಡೆ

Leave a Comment