ಸಿನಿ ಸಮಾಚಾರ

ಕೇಸರಿ ಬಣ್ಣದಲ್ಲಿ ಭರ್ಜರಿ ಮಿಂಚುತ್ತಿರುವ ಪೈಲ್ವಾನ್ ಕಿಚ್ಚ ಸುದೀಪ್

ರ್ ಕಿಚ್ಚ ಸುದೀಪ್ ನಾಯಕತ್ವದ ‘ಪೈಲ್ವಾನ್’ ಚಿತ್ರವು ಈ ತಿಂಗಳ ಕೊನೆಯಲ್ಲಿ ಚಿತ್ರಮಂದಿರದಲ್ಲಿ ಅಬ್ಬರಿಸಲಿದೆ ಎನ್ನಲಾಗುತ್ತಿದೆ. ಆದರೆ ಪೈಲ್ವಾನ್ ಚಿತ್ರದ ರಿಲೀಸ್ ದಿನಾಂಕವನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ. ಪೈಲ್ವಾನ್ ಚಿತ್ರದ ಸುದೀಪ್ ಲುಕ್ ಬಿಡುಗಡೆಯಾಗಿ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ಪೈಲ್ವಾನ್ ಚಿತ್ರದ ಲುಕ್‌ನಲ್ಲಿ ಕಿಚ್ಚ ಸುದೀಪ್ ಅವರು ಹಣೆಗೆ ಆಂಜನೇಯನ ತಿಲಕ, ಕೇಸರಿ ಬಣ್ಣದ ಪೋಷಾಕು ತೊಟ್ಟು ಸಖತ್ ಮಿಂಚಿದ್ದಾರೆ ಈ ಮೊದಲು ಬಿಡುಗಡೆಯಾಗಿದ್ದ ಪೈಲ್ವಾನ್ ಚಿತ್ರದ ಲುಕ್‌ನಲ್ಲಿ ಕಿಚ್ಚ ಸುದೀಪ್ ಮತ್ತು ಹಾಗೂ ಆಕಾಂಕ್ಷ ಸಿಂಗ್ ಜೋಡಿ ಕಾಡಿನ ಮಧ್ಯೆ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದರು. ಆ ಹೊಸ ಸ್ಟಿಲ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಈಗ, ಸುದೀಪ್ ಅವರ ಸೋಲೋ ಲುಕ್ ನೋಡಿ ಸುದೀಪ್ ಅಭಿಮಾನಿಗಳು ‘ಸುದೀಪಣ್ಣ ಲುಕ್ ಸೂಪರ್’ ಅಂತಿದ್ದಾರೆ. ಈ ಸ್ಟಿಲ್‌ನಲ್ಲಿ ಸುದೀಪ್ ವಿಭಿನ್ನವಾಗಿ ಕಾಣಿಸುತ್ತಿರುವುದು ಸತ್ಯ. ಆದರೆ, ಇದೊಂದೇ ಸ್ಟಿಲ್ ನೋಡಿ ಯಾರೇ ಆದರೂ ಕಥೆಯನ್ನು ಊಹಿಸುವುದು ಮೂರ್ಖತನವಾಗಬಹುದು.

ಸುದೀಪ್ ನಾಯಕತ್ವದ ಮುಂಬರುವ ಚಿತ್ರವಾದ ‘ಪೈಲ್ವಾನ್’ ಕನ್ನಡ ಸೇರಿದಂತೆ 9 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಹೆಚ್ಚುಕಡಿಮೆ ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರಕ್ಕೆ ಇಡೀ ಸೌಥ್ ಇಂಡಿಯಾ ಮೀರಿ ಇಂಡಿಯಾ ಲೆವಲ್‌ಗೆ ಭಾರೀ ನಿರೀಕ್ಷೆ ಕ್ರಿಯೇಟ್ ಆಗಿದೆ.

ಕಿಚ್ಚ ಸುದೀಪ್ ನಾಯಕತ್ವ, ‘ಹೆಬ್ಬುಲಿ’ ಪ್ರಸಿದ್ಧಿಯ ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಚಿತ್ರವು ಇಂಟರ್‌ನ್ಯಾಷನಲ್ ಸಬ್ಜೆಕ್ಟ್ ಹಾಗೂ ಅದ್ದೂರಿ ಮೇಕಿಂಗ್ ಮೂಲಕ ಭಾರಿ ಕಮಾಲ್ ಮಾಡಲು ಬರುತ್ತಿದೆ. ಈ ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್, ಸುನೀಲ್ ಶೆಟ್ಟಿ, ಆಕಾಂಶ ಸಿಂಗ್, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ಕೂಡ ನಟಿಸಿದ್ದಾರೆ. ನಟಿ ಆಕಾಂಕ್ಷಾ ಸಿಂಗ್ ಸುದೀಪ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಪೈಲ್ವಾನ್ ಚಿತ್ರವು ಇದೇ ಏಪ್ರಿಲ್ 2019ರ ಕೊನೆಯಲ್ಲಿ ತೆರೆಗೆ ಬರಲಿದೆ.

About the author

ಕನ್ನಡ ಟುಡೆ

Leave a Comment