ರಾಜ್ಯ ಸುದ್ದಿ

ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕದಿಂದ ವಿಶ್ವ ದಾಖಲೆ

ಕಾರವಾರ: ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ 941 ದಿನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ಮೊದಲ ಅಣು ವಿದ್ಯುತ್​ ಘಟಕ ವಿಶ್ವ ದಾಖಲೆ ನಿರ್ಮಿಸಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಕೈಗಾದ ಒಂದನೇ ಘಟಕ ಸೋಮವಾರ ಬೆಳಗ್ಗೆ 9.30ಕ್ಕೆ ಈ ದಾಖಲೆ ಬರೆದಿದ್ದು, ಬ್ರಿಟನ್​ನ ಹೇಶಾಮ್ ವಿದ್ಯುತ್ ಘಟಕದ ದಾಖಲೆ ಸರಿಗಟ್ಟಿದೆ. 941 ದಿನದಲ್ಲಿ 4,900 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿರುವ ಕೈಗಾ, 2016 ಮೇ 13 ರಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಡಿ.31ರ ವರೆಗೂ ವಿದ್ಯುತ್ ಉತ್ಪಾದನೆ ಮುಂದುವರಿವರಿಸಲಿದೆ. ಇದಕ್ಕೆ ಭಾರತೀಯ ಅಣು ವಿದ್ಯುತ್ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿಯೂ ದೊರೆತಿದೆ. ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1999ರಲ್ಲಿ ಕೈಗಾ ಅಣು ವಿದ್ಯುತ್ ಘಟಕಕ್ಕೆ ಚಾಲನೆ ನೀಡಿದ್ದರು. ಕೈಗಾ 220 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಘಟಕಗಳನ್ನು ಹೊಂದಿದೆ. 

About the author

ಕನ್ನಡ ಟುಡೆ

Leave a Comment