ರಾಜಕೀಯ

ಕೈಗೆ ಬಿಗ್‌ ಶಾಕ್‌: ಬಿಜೆಪಿ ಸೇರ್ಪಡೆಯಾದ ಆದಿವಾಸಿ ಮುಖಂಡ, ರಾಮ್‌ ದಯಾಲ್‌ ಉಯ್‌ಕೆ

ರಾಯ್‌ಪುರ್‌: ವಿಧಾನಸಭಾ ಚುನಾವಣೆಯ ಕಾವು ಹೆಚ್ಚಿರುವ ಛತ್ತೀಸ್‌ಗಡದಲ್ಲಿ ಅಧಿಕಾರ ಉಳಿಸಿಕೊಳ್ಳಲು ಭಾರಿ ರಣ ತಂತ್ರಗಳನ್ನು ಹೂಡುತ್ತಿರುವ ಬಿಜೆಪಿ ಶನಿವಾರ ಕಾಂಗ್ರೆಸ್‌ಗೆ ಭಾರೀ ಶಾಕ್‌ ನೀಡಿದೆ.

ಪ್ರಬಲ ಆದಿವಾಸಿ ಮುಖಂಡರಾಗಿರುವ ಕಾಂಗ್ರೆಸ್‌ನ ರಾಜ್ಯ ಕಾರ್ಯಾಧ್ಯಕ್ಷರಾಗಿದ್ದ ರಾಮ್‌ ದಯಾಲ್‌ ಉಯ್‌ಕೆ ಅವರನ್ನು ಕೇಸರಿ ಪಡೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಾಲ್ಕು ಭಾರಿ ಶಾಸಕರಾಗಿರುವ ಉಯ್‌ಕೆ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮತ್ತು ಛತ್ತೀಸ್‌ಗಡ ಸಿಎಂ ರಮಣ್‌ ಸಿಂಗ್‌ ಅವರ ಸಮ್ಮುಖದಲ್ಲಿ  ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

 

About the author

ಕನ್ನಡ ಟುಡೆ

Leave a Comment