ರಾಜ್ಯ ಸುದ್ದಿ

ಕೈನೋವು ಚಿಕಿತ್ಸೆಗೆ ಕೇರಳಕ್ಕೆ ತೆರಳಿದ ಯಡಿಯೂರಪ್ಪ

ಬೆಂಗಳೂರು: ಹಲವು ದಿನಗಳಿಂದ ತೀವ್ರವಾಗಿ ಬಾಧಿಸುತ್ತಿರುವ ಕೈನೋವಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ಕೇರಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತೆರಳಿದ್ದಾರೆ. ಶುಕ್ರವಾರ ಮಧ್ಯಾಹ್ನ ವಿಮಾನದ ಮೂಲಕ ಕೇರಳದ ಕೊಟ್ಟಾಯಂನಲ್ಲಿರುವ ಆಯುರ್ವೆದ ವೈದ್ಯಶಾಲಾ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋಗಿದ್ದಾರೆ. ಅನೇಕ ದಿನಗಳಿಂದ ಕೈನೋವು ಬಾಧಿಸುತ್ತಿದ್ದು, ರಾಜ್ಯ ಪ್ರವಾಸಕ್ಕೂ ತೊಂದರೆಯಾಗುತ್ತಿತ್ತು. ವಿಶೇಷ ಚಿಕಿತ್ಸೆ, ಮಸಾಜ್ ಸಲುವಾಗಿ ಸುಮಾರು ಒಂದುವಾರ ಅಲ್ಲಿ ತಂಗಲಿದ್ದಾರೆ. ಜತೆಗೆ ಗನ್​ವ್ಯಾನ್ ಮಾತ್ರ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment