ಸುದ್ದಿ

ಕೈಲಾಸ್ ಮಾನಸ ಸರೋವರ ಯಾತ್ರೆಗೆ: ಸುಷ್ಮಾ ಸ್ವರಾಜ್ ಚಾಲನೆ

ನವದೆಹಲಿ: ಮೊದಲ ಗುಂಪಿನ ಭಕ್ತಾದಿಗಳನ್ನು ಒಳಗೊಂಡ ಕೈಲಾಸ್ ಮಾನಸ ಸರೋವರ ವಾರ್ಷಿಕ ಯಾತ್ರೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಚಾಲನೆ ನೀಡಿದರು. ಈ ಯಾತ್ರೆಯ ಮಾರ್ಗದುದ್ದಕ್ಕೂ ರಸ್ತೆಯಲ್ಲಿ ಶುಚಿತ್ವಕ್ಕೂ ಮಹತ್ವ ನೀಡುವಂತೆ ಹೇಳಿದರು.

ಶಿವನಿಗೆ ಎಷ್ಟು ಭಕ್ತಿ, ಗೌರವ ನೀಡುತ್ತೇವೋ ಆತನ ವಾಸಸ್ಥಳಕ್ಕೂ ಅಷ್ಟೇ ಮಹತ್ವ ನೀಡಬೇಕು. ಆದ್ದರಿಂದ ಅಲ್ಲಿಗೆ ತೆರಳುವ ದಾರಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಾವಿರದ ನಾನೂರಾ ಮೂವತ್ತು ಭಕ್ತರು ಇಪ್ಪತ್ತೈದು ಗುಂಪುಗಳಲ್ಲಿ ಈ ವರ್ಷ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಅರವತ್ತು ಭಕ್ತರನ್ನು ಒಳಗೊಂಡ ಹದಿನೆಂಟು ಗುಂಪು ಲಿಪುಲೆಕ್ ಪಾಸ್ ಮಾರ್ಗದಲ್ಲಿ ಹಾಗೂ ಐವತ್ತು ಭಕ್ತರನ್ನು ಒಳಗೊಂಡ ಏಳು ಗುಂಪು ಹೊಸದಾಗಿ ಅರಂಭವಾಗಿರುವ ನಾಥು ಲಾ ಮಾರ್ಗದಲ್ಲಿ ಮಾನಸ ಕೈಲಾಸ ಮಾನಸ ಸರೋವರಕ್ಕೆ ತೆರಳಲಿದೆ.

About the author

ಕನ್ನಡ ಟುಡೆ

Leave a Comment