ರಾಜಕೀಯ

ಕೈ ನಾಯಕರ ಗುಂಪುಗಾರಿಕೆ: ಫೈನಲ್ ಆಗಿಲ್ಲ ಉತ್ತರ ಕರ್ನಾಟಕ ಅಭ್ಯರ್ಥಿಗಳ ಪಟ್ಟಿ

ಬೆಳಗಾವಿ: ನಾಯಕರ ನಡುವಿನ ಗುಂಪುಗಾರಿಕೆ, ಉತ್ತರ ಕರ್ನಾಟಕದ  12 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಗೊಂದಲ ಇನ್ನೂ ಮುಗಿದಿಲ್ಲ, ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದರೂ ಟಿಕೆಟ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ,  ಉತ್ತರ ಕರ್ನಾಟಕದ 12 ಕ್ಷೇತ್ರಗಳಿಗೆ ಏಪ್ರಿಲ್ 213 ರಂದು ಚುನಾವಣೆ ನಡೆಯಲಿದೆ. ಅಸಮಾಧಾನಗೊಂಡ ನಾಯಕರನ್ನು ಕಾಂಗ್ರೆಸ್ ಮುಖಂಡರು ಶೀಘ್ರವೇ  ಭೇಟಿ ಮನವೊಲಿಸಲಿದ್ದಾರೆ, ಉತ್ತರ ಕರ್ನಾಟಕ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ, ಮಲ್ಲಿಕಾರ್ಜುನ ಖರ್ಗೆ, ಮತ್ತು ಬಿ ಶಂಕರಾನಂದ ಹಲವು ಬಾರಿ ಸಂಸದೀಯ ಚುನಾವಣೆಗಳನ್ನು ಗೆದ್ದಿದ್ದಾರೆ, ಆದರೆ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳು ಆಂತರಿಕ ಕಲಹದಿಂದ ಬಳಲುತ್ತಿವೆ. ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಹೋದರರ ಬೆಂಬಲದೊಂದಿಗೆ ಎಂಎಲ್ ಸಿ ವಿವೇಕ್ ರಾವ್ ಪಾಟೀಲ್ ಕಣಕ್ಕಿಲಿಸಲು ಚಿಂತಿಸಿದ್ದಾರೆ, ಕುರುಬ ಸಮುದಾಯಕ್ಕೆ ಸೇರಿದ ಪಾಟೀಲ್ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಸಮರ್ಥರಾಗಿದ್ದಾರೆ,  ನಾಲ್ಕು ಬಾರಿ ಸಂಸದರಾಗಿದ್ದ ಬಿ,ಸಿದ್ನಾಳ್ ಪುತ್ರ ಹಾಗೂ ಲಿಂಗಾಯತ ಉದ್ಯಮಿ ಶಿವಕಂಠ ಸಿದ್ನಾಳ್ ಕೂಡ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಅಂಜಲಿ ನಿಂಬಾಳ್ಕರ್, ವಿವೇಕ್ ರಾವ್ ಪಾಟೀಲ್ ಮತ್ತು ಚೆನ್ನರಾಜ್ ಹತ್ತಿಹೊಳಿ, ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ, ಸಿದ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಸಮರ್ಥ ಅಭ್ಯರ್ಥಿಗಳು, ಚಿಕ್ಕೋಡಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ, ತಮಗೆ ಸೀಟು ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ, ಒಂದು ವೇಳೆ ಪಕ್ಷ ಬಯಸಿದರೇ ಬೆಳಗಾವಿಯಿಂದ ಸ್ಪರ್ದಿಸಲೂ ತಾವು ಸಿದ್ದರಿರುವುದಾಗಿ ತಿಳಿಸಿದ್ದಾರೆ,  ಆದರೆ ರಮೇಶ್ ಜಾರಕಿಹೊಳಿ ಚಿಕ್ಕೋಡಿಯಿಂದ ಬಿಜೆಪಿ ಟಿಕೆಟ್ ನಿಂದ ಸ್ಪರ್ದಿಸಲು ಸಿದ್ದರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಆಸಕ್ತಿಯಿಲ್ಲ ಎಂದು ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ, ಶಿವಕಂಠ ಸಿದ್ನಾಳ್ ತಮ್ಮ ಹೆಸರು ಸಂಭವನೀಯರ ಪಟ್ಟಿಯಲ್ಲಿದೆ ಎಂದು ಹೇಳಿದ್ದಾರೆ, ಗೋಕಾಕ್ ನಿಂದ ಲಖನ್ ಜಾರಕಿಹೊಳಿಯನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಥತೆ ನಡೆಸುತ್ತಿದೆ, ಕಲಬುರಗಿ ಮತ್ತು ಬೀದರ್ ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಸಿಂಗ್ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ, ಆದರೆ ಬೀದರ್ ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಪತ್ನಿ.ನ್ನ ಕಣಕ್ಕಿಳಿಸಬೇಕೆಂದು ಖಂಡ್ರೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೂ ವಿಜಯಾಪುರ ಲೋಕಸಭೆ ಕ್ಷೇತ್ರಕ್ಕೆ ಶಾಸಕ ರಾಜು ಅಲ್ಗೂರ್ ಅವರಿಗೆ ಟಿಕೆಟ್ ನೀಡಬೇಕೆಂದು ಗೃಹ ಸಚಿವ ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ.

About the author

ಕನ್ನಡ ಟುಡೆ

Leave a Comment