ರಾಷ್ಟ್ರ

ಕೈ  ಪ್ರಚಾರಕ್ಕೆ ಪ್ರಿಯಾಂಕಾ ಗಾಂಧಿಯನ್ನು ಕರೆತರುವಂತೆ ಅಭ್ಯರ್ಥಿಗಳ ಒತ್ತಡ

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಲವು ಕೈ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸ್ಟಾರ್​ ಪ್ರಚಾರಕಿಯಾಗಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆತರುವಂತೆ ಒತ್ತಡ ಹಾಕುತ್ತಿದ್ದಾರೆ. ರಾಹುಲ್​​ಗಿಂತಲೂ ಪ್ರಿಯಾಂಕಾಗೆ ಭಾರಿ ಡಿಮ್ಯಾಂಡ್ ಹೆಚ್ಚಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ತಿರುಗೇಟು ನೀಡಲು ಪ್ರಿಯಾಂಕಾ ಗಾಂಧಿಯಿಂದ ಮಾತ್ರ ಸಾಧ್ಯ. ಪ್ರಿಯಾಂಕಾ ಗಾಂಧಿ ಮುಖದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ವರ್ಚಸ್ಸಿದೆ. ಹಾಗಾಗಿ ರಾಜ್ಯದ ನಾಲ್ಕು ಕಡೆ ಸಮಾವೇಶ ಮಾಡಿ ಅವರನ್ನು ಪ್ರಚಾರಕ್ಕೆ ಕರೆಸುವಂತೆ ಹಲವು ಅಭ್ಯರ್ಥಿಗಳು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್​ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಷಯವನ್ನು ಸಿದ್ದರಾಮಯ್ಯ ಮತ್ತು ಪರಮೇಶ್ವರ್​ ಅವರು ರಾಹುಲ್​ ಗಾಂಧಿ ಅವರಿಗೆ ಮುಟ್ಟಿಸಿದ್ದಾರೆ. ಪ್ರಚಾರಕ್ಕೆ ಆಗಮಿಸುವ ಕುರಿತು ಪ್ರಿಯಾಂಕಾ ಗಾಂಧಿ ಸ್ವಂತ ನಿರ್ಧಾರ ತೆಗೆದುಕೊಳ್ಳಲಿದ್ಧಾರೆ. ಬಲವಂತ ಮಾಡಿ ಕರೆದುಕೊಂಡು ಬರಲು ಸಾಧ್ಯವಿಲ್ಲ ಎಂದು ರಾಹುಲ್​ ತಿಳಿಸಿರುವುದಾಗಿ ಕಾಂಗ್ರೆಸ್​ನ ಮೂಲಗಳು ತಿಳಿಸಿವೆ.

 

 

About the author

ಕನ್ನಡ ಟುಡೆ

Leave a Comment