ರಾಜಕೀಯ

ಕೈ ಹಿಡಿದ ಅಶೋಕ್ ಖೇಣೆ

ಬೆಂಗಳೂರು: ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ಖೇಣೆ ಹಾಗೂ ಮಾಜಿ ಸಚಿವರಾದ ಆರ್.ಎಲ್.ನಾಯಕ ಅವರು ಇಂದು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಖೇಣೆ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.ನೈಸ್ ಸಂಸ್ಥೆಯ ಮುಖ್ಯಸ್ಥ ಖೇಣೆಯವರನ್ನು  ಪಕ್ಷಕ್ಕೆ ಬರಮಾಡಿಕೊಂಡ ಪರಮೇಶ್ವರ್ ಖೇಣೆ ಸೇರ್ಪಡೆಯಿಂದಾಗಿ ಬೀದರ್ ಜಿಲ್ಲಾ ಕಾಂಗ್ರೆಸ್ನಲ್ಲಿ ಬಲ ಬಂದಿದೆ ಎಂದಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರದಿಂದ ಕರ್ನಾಟಕ ಮಕ್ಕಳ ಪಕ್ಷದಿಂದ ಅಶೋಕ್ ಅವರು 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿದ್ದರು.

ಈ ಸಂದರ್ಭದಲ್ಲಿ ಇಂದನ ಸಚಿವರಾದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ ಚಂದ್ರಶೇಖರ್ ಮತ್ತು ಶ್ರೀಮತಿ ಮೀನಾಕ್ಷಿ ಸಂಗ್ರಾಮ್  ಉಪಸ್ಥಿರಿದ್ದರು.

 

 

 

 

 

 

 

 

 

 

 

About the author

ಕನ್ನಡ ಟುಡೆ

Leave a Comment