ರಾಜ್ಯ ಸುದ್ದಿ

ಕೊಡಗು ರಕ್ಷಣೆ ತಮಿಳುನಾಡಿನ ಕರ್ತವ್ಯ; ಹಕ್ಕೊತ್ತಾಯಕ್ಕೆ ಆಗ್ರಹಿಸಿ ಪತ್ರ ಬರೆದ ಸಾಹಿತಿ ಎಸ್​.ಎಲ್​.ಭೈರಪ್ಪ

ಮೈಸೂರು: ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಗೆ ತಮಿಳುನಾಡು ಸರ್ಕಾರ ಪರಿಹಾರ ಕೊಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಹಾಗೂ ನ್ಯಾಯಮಂಡಳಿಗೆ ಹಕ್ಕೊತ್ತಾಯ ಮಾಡಬೇಕು ಎಂದು ಖ್ಯಾತ ಸಾಹಿತಿ ಎಸ್​.ಎಲ್​.ಭೈರಪ್ಪನವರು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ತಮಿಳುನಾಡಿನವರಿಗೆ ಕುಡಿಯಲು ಕೊಡಗಿನ ನೀರು ಬೇಕು. ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವುದು ಕರ್ನಾಟಕದ ಕೆಲಸ. ಅದರ ಫಲ ಉಣ್ಣುವುದು ತಮಿಳುನಾಡಾ? ಕೊಡಗಿನ ನೀರು ಕುಡಿಯುವ ತಮಿಳುನಾಡಿಗೆ ರಕ್ಷಣೆಯ ಜವಾಬ್ದಾರಿ ಇರಬೇಕು. ಆದರೆ, ತನಗೇನೂ ಕರ್ತವ್ಯ ಇಲ್ಲವೆಂಬಂತೆ ಸುಮ್ಮನೆ ಇದೆ. ಕೊಡಗಿನ ಹಾನಿಗೆ ತಮಿಳುನಾಡು ಸ್ಪಂದಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಹಕ್ಕೊತ್ತಾಯ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

About the author

ಕನ್ನಡ ಟುಡೆ

Leave a Comment