ರಾಜಕೀಯ

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ, ಎಂ.ಬಿ. ಪಾಟೀಲ್ ಗೆ ಗೃಹ ಖಾತೆ

ಬೆಂಗಳೂರು: ಕೊನೆಗೂ ಕಾಂಗ್ರೆಸ್ – ಜೆಡಿಎಸ್ ದೋಸ್ತಿ ಸರ್ಕಾರದ ಎಂಟು ನೂತನ  ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಲಾಗಿದ್ದು, ಎಂ.ಬಿ. ಪಾಟೀಲ್​ ಅವರಿಗೆ ಗೃಹ ಖಾತೆ ಕೊಡಿಸುವಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಎಂಬಿ ಪಾಟೀಲ್ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ತಾವು ಕಾರ್ಯನಿರ್ವಹಿಸಿದ ಜಲಸಂಪನ್ಮೂಲ ಖಾತೆಯನ್ನೇ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆ ಖಾತೆ ಡಿಕೆ ಶಿವಕುಮಾರ್​ ಅವರ ಬಳಿಯಿದ್ದು, ಗೃಹ ಖಾತೆಯನ್ನು ನೀಡುವುದಾಗಿ ಕೈ ಮುಖಂಡರು ಭರವಸೆ ನೀಡಿದ್ದರು. ಆದರೆ ಉಪ ಮುಖ್ಯಮಂತ್ರಿ ಪರಮೇಶ್ವರ ಅವರು ಗೃಹ ಖಾತೆಯನ್ನು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ವಿಳಂಬವಾಗಿತ್ತು.

ನೂತನ ಸಚಿವರ ಖಾತೆಗಳ ವಿವರ
1) ಎಂಬಿ ಪಾಟೀಲ್: ಗೃಹ ಖಾತೆ, ಆರ್​ಡಿಪಿಆರ್
2) ಆರ್.ಬಿ. ತಿಮ್ಮಾಪುರ: ಕೌಶಲ್ಯಾಭಿವೃದ್ಧಿ ಖಾತೆ
3) ಎಂಟಿಬಿ ನಾಗರಾಜ್: ವಸತಿ ಖಾತೆ
4) ಪರಮೇಶ್ವರ್ ನಾಯ್ಕ್:​ ಮುಜರಾಯಿ, ಐಟಿಬಿಟಿ ಖಾತೆ
5) ಸಿಎಸ್ ಶಿವಳ್ಳಿ: ಪೌರಾಡಳಿತ, ಬಂದರು ಖಾತೆ
6) ರಹೀಮ್ ಖಾನ್: ಯುವಜನ ಸೇವೆ ಮತ್ತು ಕ್ರೀಡೆ ಖಾತೆ
7) ಸತೀಶ್ ಜಾರಕಿಹೊಳಿ: ಅರಣ್ಯ ಖಾತೆ
8) ಇ. ತುಕಾರಾಮ್: ವೈದ್ಯಕೀಯ ಶಿಕ್ಷಣ ಖಾತೆ

About the author

ಕನ್ನಡ ಟುಡೆ

Leave a Comment