ಕ್ರೀಡೆ

ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಒಂದು ದೊಡ್ಡ ಶಕ್ತಿ ಎಂದ ಪಾಕಿಸ್ತಾನದ ವಾಕರ್​ ಯೂನಿಸ್​

ನವದೆಹಲಿ: ಮುಂಬರುವ ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಒಂದು ದೊಡ್ಡ ಶಕ್ತಿಯಾಗಲಿದೆ ಎಂದು ಪಾಕಿಸ್ತಾನದ ಬೌಲಿಂಗ್​ ದಂತಕತೆ ವಾಕರ್​ ಯೂನಿಸ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬುಧವಾರ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಟೀಂ ಇಂಡಿಯಾ ಯಾವಾಗಲೂ ವಿಶ್ವಕಪ್​ಗೆ ಹೋಗುವ ಶಕ್ತಿಯಾಗಿರುತ್ತದೆ. ಆದರೆ, ವಿರಾಟ್​ ಕೊಹ್ಲಿ ಮರಳಿ ಬಂದಿರುವುದರಿಂದ ತಂಡ ಬಹಳ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದಲಿದೆ ಎಂದು ತಿಳಿಸಿದರು.

ಕ್ಷೇತ್ರ ರಕ್ಷಣೆ ವಿಭಾಗದಲ್ಲಿ ಟೀಂ ಇಂಡಿಯಾ ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದೆ. ಬ್ಯಾಟಿಂಗ್​ ವಿಭಾಗವಂತೂ ಹಿಂದಿನಿಂದಲೂ ಒಳ್ಳೆಯ ಲಯದಲ್ಲಿದೆ. ಎಲ್ಲ ಯುವ ಆಟಗಾರರು ತಮ್ಮ ಫಿಟ್​ನೆಸ್​ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಯೂನಿಸ್​​ ತಂಡವನ್ನು ಕೊಂಡಾಡಿದ್ದಾರೆ.

ರೋಹಿತ್​ ನಾಯಕತ್ವಕ್ಕೂ ಶಹಬ್ಬಾಸ್​ ಗಿರಿ: ರೋಹಿತ್​ ನಾಯಕತ್ವದಲ್ಲಿ ಏಷ್ಯಾ ಕಪ್​ ಫೈನಲ್​ನಲ್ಲಿ ಬಾಂಗ್ಲಾ ವಿರುದ್ಧ ಜಯ ಸಾಧಿಸಿ ಟ್ರೋಫಿ ಎತ್ತಿ ಟೀಂ ಇಂಡಿಯಾವನ್ನು ಶ್ಲಾಘಿಸಿದ ವಾಕರ್​ ಯೂನಿಸ್​, ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್​ ತಮ್ಮ ಜವಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದರು. ರೋಹಿತ್​ ನಾಯಕತ್ವದಲ್ಲೂ ಬೆಳವಣಿಗೆ ಕಾಣುತ್ತಿದೆ. ಅವರ ನಾಯಕತ್ವವನ್ನು ಐಪಿಎಲ್​ನಲ್ಲಿ ನೋಡಿದ್ದೇನೆ. ಅವರು ತುಂಬಾ ತಾಳ್ಮೆಯ ವ್ಯಕ್ತಿ ಎಂದು ಹೊಗಳಿದ್ದಾರೆ.

About the author

ಕನ್ನಡ ಟುಡೆ

Leave a Comment