ಕ್ರೀಡೆ

ಕೊಹ್ಲಿ ಮತ್ತು ಭಾರತ ನಂ.1

ದುಬೈ: ಟೀಮ್‌ ಇಂಡಿಯಾ ಹಾಗೂ ವಿರಾಟ್‌ ಕೊಹ್ಲಿ ಟೆಸ್ಟ್‌ ನಂ.1 ಪಟ್ಟ ಅಬಾಧಿತವಾಗಿ ಮುಂದುವರಿದಿದೆ. ಗುರುವಾರ ಬಿಡುಗಡೆಗೊಂಡ ಟೆಸ್ಟ್‌ ತಂಡಗಳ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ ಹಾಗೂ ಆಟಗಾರರ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿಗೆ ಮತ್ತೊಮ್ಮೆ ಅಗ್ರ ಸ್ಥಾನ ಲಭಿಸಿದೆ.

ಇತ್ತೀಚೆಗೆ ಟೆಸ್ಟ್‌ ಸರಣಿಯಲ್ಲಿ 8ನೇ ಶ್ರೇಯಾಂಕದ ವೆಸ್ಟ್‌ ಇಂಡೀಸ್‌ ತಂಡವನ್ನು 2-0 ಅಂತರದಿಂದ ಸೋಲಿಸಿರುವ ಭಾರತದ ತಂಡದ ಖಾತೆಯಲ್ಲೀಗ 116 ಅಂಕಗಳಿವೆ. 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಬಳಿ 106 ಅಂಕಗಳಿವೆ. ಇನ್ನು, ಆಟಗಾರರ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ 935 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರುವ ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ ಖಾತೆಯಲ್ಲಿ 910 ಅಂಕಗಳಿವೆ. ಸ್ಮಿತ್‌ ಪ್ರಸ್ತುತ ನಿಷೇಧ ಶಿಕ್ಷೆಯಲ್ಲಿರುವುದರಿಂದ ಸದ್ಯಕ್ಕೆ ಕೊಹ್ಲಿ ಅವರ ಅಗ್ರ ಪಟ್ಟಕ್ಕೆ ಧಕ್ಕೆ ಎದುರಾಗುವ ಸಾಧ್ಯತೆಗಳಿಲ್ಲ. ಭಾರತ ತಂಡದ ಮಧ್ಯಮ ಸರದಿಯ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ 765 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.

About the author

ಕನ್ನಡ ಟುಡೆ

Leave a Comment