ರಾಷ್ಟ್ರ ಸುದ್ದಿ

ಕೋಲ್ಕತದಲ್ಲಿ ರಸ್ತೆಗೆ ಕಸ ಎಸೆದರೆ 1 ಲಕ್ಷ ರೂ. ದಂಡ

ಕೋಲ್ಕತ: ಕೋಲ್ಕತ ಮಹಾನಗರದಲ್ಲಿ ರಸ್ತೆ ಮೇಲೆ ಕಸ ಎಸೆದರೆ ಕನಿಷ್ಠ 5 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಮಸೂದೆಯನ್ನು ಪಶ್ಚಿಮಬಂಗಾಳ ವಿಧಾನಸಭೆ ಅನುಮೋದಿಸಿದೆ. ಗುರುವಾರ ನಡೆದ ಅಧಿವೇಶನದಲ್ಲಿ ಕೋಲ್ಕತ ಮುನ್ಸಿಪಲ್ ಕಾಪೋರೇಷನ್ (2ನೇ ತಿದ್ದುಪಡಿ) ಮಸೂದೆ, 2018ರಲ್ಲಿ 338ನೇ ವಿಧಿಗೆ ತಿದ್ದುಪಡಿ ತರುವ ಮಸೂದೆಗೆ ಅನುಮೋದನೆ ನೀಡಲಾಗಿದೆ.

ಇದಕ್ಕೂ ಮುನ್ನ ರಸ್ತೆಗಳಲ್ಲಿ ಕಸ ಎಸೆದರೆ 50 ರೂ.ನಿಂದ 5 ಸಾವಿರ ರೂ.ವರೆಗೆ ಜುಲ್ಮಾನೆ ವಿಧಿಸಲಾಗುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮತ್ತು ಕಸ ವಿಲೇವಾರಿ ಸಮಸ್ಯೆ ಪರಿಹರಿಸಲು ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಖ್ಯ ಕಾರ್ಯದರ್ಶಿ ಮೊಲೊಯ್ ಡೇ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಈ ಸಮಿತಿ ಮಾಡಿದ ಶಿಫಾರಸನ್ನು ಆಧರಿಸಿ, ಜುಲ್ಮಾನೆ ಹೆಚ್ಚಿಸುವ ಮಸೂದೆ ರೂಪಿಸಲಾಗಿತ್ತು.

About the author

ಕನ್ನಡ ಟುಡೆ

Leave a Comment