ರಾಷ್ಟ್ರ ಸುದ್ದಿ

ಕೋಲ್ಕತ್ತಾದಲ್ಲಿ ಬಾಂಬ್ ಸ್ಫೋಟ 8 ವರ್ಷದ ಮಗು ಸಾವು, 11 ಜನರಿಗೆ ಗಾಯ

ಕೋಲ್ಕತ್ತಾ: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ದಿನದಂದೆ ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ್ ಸಂಭವಿಸಿದ್ದು ಪರಿಣಾಮ 8 ವರ್ಷದ ಮಗು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಡಮ್ ಡಮ್ ಪೊಲೀಸ್ ಠಾಣಾ ವ್ಯಾಪ್ತಿಯ ನಗೆರ್ ಬಜಾರ್ ಪ್ರದೇಶದ ಕಝಿಪುರ ಏರಿಯಾದಲ್ಲಿರುವ ಕಟ್ಟಡದ ನೆಲಮಹಡಿಯ ಸ್ವೀಟ್ ಶಾಪ್ ನ ಹೊರಗಡೆ ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಇದೇ ಕಟ್ಟಡದಲ್ಲಿ ಸ್ಥಳೀಯ ಪಾಲಿಕೆ ಅಧ್ಯಕ್ಷರ ಕಚೇರಿಯೂ ಇದ್ದು ಅವರನ್ನು ಟಾರ್ಗೆಟ್ ಮಾಡಿ ಈ ಬಾಂಬ್ ಸ್ಫೋಟ ನಡೆಸಲಾಗಿತ್ತಾ ಎಂಬ ಪ್ರಶ್ನೆ ಮೂಡಿದೆ. ಸ್ಫೋಟದಲ್ಲಿ 11 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆರ್ ಜಿ ಕರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯಾ ದಳ ಹಾಗೂ ಶ್ವಾನ ದಳ ದೌಡಾಯಿಸಿದ್ದು ಸ್ಫೋಟಕ್ಕೆ ಕಾರಣವೇನೆಂಬುದರ ಬಗ್ಗೆ ಶೋಧಕಾರ್ಯ ನಡೆಸುತ್ತಿದೆ.

About the author

ಕನ್ನಡ ಟುಡೆ

Leave a Comment