ರಾಜ್ಯ ಸುದ್ದಿ

ಕ್ಯಾಟ್ ಫಲಿತಾಂಶ ಪ್ರಕಟಕ್ಕೆ ಮೀನಮೇಷ

ಬೆಂಗಳೂರು: ಕುಶಲಕರ್ವಿು ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಕೆಎಸ್​ಆರ್​ಟಿಸಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ (ಕ್ಯಾಟ್) ನಡೆಸಿ 2 ತಿಂಗಳು ಕಳೆದಿದೆ. ಆದರೆ, ಅಂತಿಮ ಉತ್ತರ ಪ್ರಕಟಿಸಲು ನಿಗಮ ಇನ್ನೂ ಮೀನಮೇಷ ಎಣಿಸುತ್ತಿರುವುದು ಅಭ್ಯರ್ಥಿಗಳ ಭವಿಷ್ಯವನ್ನೇ ಡೋಲಾಯಮಾನ ಆಗಿಸಿದೆ.

ಅ.6 ಮತ್ತು 7ರಂದು ಕ್ಯಾಟ್ ನಡೆಸಿದ್ದ ನಿಗಮ, ಅ. 23ರಂದು ಸರಿ ಉತ್ತರಗಳನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಿತ್ತು. ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದ ನಿಗಮ, ಅ.30ರೊಳಗೆ ಸಲ್ಲಿಸಲು ಸೂಚಿಸಿತ್ತು. ಇದಾಗಿ ತಿಂಗಳು ಕಳೆದರೂ ಅಂತಿಮ ಉತ್ತರ ಪ್ರಕಟವಾಗಿಲ್ಲ ಎಂದು ಅಭ್ಯರ್ಥಿಗಳು ‘ವಿಜಯವಾಣಿ ಸಹಾಯವಾಣಿ’ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಪರೀಕ್ಷೆ ಮುಗಿದು ತಿಂಗಳು ಕಳೆದರೂ ಅಂತಿಮ ಉತ್ತರವನ್ನು ನಿಗಮ ಪ್ರಕಟಿಸಿಲ್ಲ. ಜತೆಗೆ 1:5 ಅನುಪಾತದ ಅಭ್ಯರ್ಥಿಗಳ ಪಟ್ಟಿಯೂ ಪ್ರಕಟವಾಗಿಲ್ಲ. ನಿಗಮದ ಸಹಾಯವಾಣಿಗೆ ಕರೆ ಮಾಡಿದರೆ ಸಿಬ್ಬಂದಿ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಂದಾಜು 3 ವರ್ಷಗಳಿಂದ ಬೇರೆ ಉದ್ಯೋಗಗಳಿಗೆ ಸೇರದೆ ಇದನ್ನೇ ನಂಬಿಕೊಂಡು ಕುಳಿತಿರುವ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.

 

About the author

ಕನ್ನಡ ಟುಡೆ

Leave a Comment