ರಾಜಕೀಯ ಸುದ್ದಿ

ಕ್ಯಾಮೆರಾ ಕಂಡ ಕೂಡಲೇ ಮಾತನಾಡಬೇಡಿ ಬಿಜೆಪಿ ನಾಯಕರಿಗೆ ಎಚ್ಚರಿಕೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕ್ಯಾಮೆರಾ, ಮೈಕ್‌ ಕಂಡ ತಕ್ಷಣ ಪುಳಕಿತರಾಗಿ ಮನಬಂಂದತೆ ಬೇಜವಾಬ್ದಾರಿ ಹೇಳಿಕೆ ನೀಡಿ ಮಾಧ್ಯಮಗಳಿಗೆ ಮಸಾಲೆ ಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ನಾಯಕರು ಮತ್ತು ಸಂಸದರ ಜತೆ ಭಾನುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡ ಅವರು, ವಿವಾದಾತ್ಮಕ ಹೇಳಿಕೆಗಳ ಮೂಲಕ ಮಾಧ್ಯಮಗಳಿಗೆ ಆಹಾರವಾಗಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ. ಪ್ರತಿ ಬಾರಿಯೂ ಮಾಧ್ಯಮಗಳ ಮೇಲೆ ತಪ್ಪು ಹೊರಿಸುವುದು ಸರಿಯಲ್ಲ. ತಪ್ಪು ಮಾಡಿ ಮಾಧ್ಯಮಗಳಿಗೆ ಆಹಾರ, ಮಸಾಲೆ ಒದಗಿಸುವವರು ನಾವೇ ತಾನೇ’ ಎಂದರು. ‘ಎಲ್ಲ ವಿಷಯಗಳ ಬಗ್ಗೆಯೂ ಸಮಾಜ ವಿಜ್ಞಾನಿಗಳಂತೆ, ವಿಷಯ ತಜ್ಞರಂತೆ ನೀಡುವ ಅರೆಬೆಂದ ಹೇಳಿಕೆಗಳು ಮಾಧ್ಯಮಗಳಿಗೆ ಆಹಾರವಾಗುತ್ತವೆ. ಇದು ಮಾಧ್ಯಮಗಳ ತಪ್ಪಲ್ಲ. ನಮ್ಮ ಅಜ್ಞಾನ’ ಎಂದು ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷ ಸೂಚಿಸಿದವರು ಮಾತ್ರ ಮಾಧ್ಯಮಗಳಿಗೆ ಹೇಳಿಕೆ ನೀಡಬೇಕು ಎಂದು ಅವರು ತಾಕೀತು ಮಾಡಿದ್ದಾರೆ.

ಒಂದೆರಡು ಅತ್ಯಾಚಾರ ಸಹಜ ಲಖನೌ: ಭಾರತದಂತಹ ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರ ಪ್ರಕರಣ ಸಾಮಾನ್ಯ. ಅವನ್ನು ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಇಂತಹ ಘಟನೆಗಳು ದುರದೃಷ್ಟಕರ. ಒಂದೆರೆಡು ಪ್ರಕರಣ ಮುಂದಿಟ್ಟುಕೊಂಡು ಅವಾಂತರ ಸೃಷ್ಟಿಸುವುದು ಸರಿಯಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment