ಕ್ರೀಡೆ

ಕ್ರಿಕೆಟ್ ದೇವರು ಸಚಿನ್​ಗೆ 45ನೇ ಜನ್ಮದಿನದ ಸಂಭ್ರಮ

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಂಗಳವಾರ 45ನೇ ವರ್ಷಕ್ಕೆ ಕಾಲಿಡಲಿದ್ದಾರೆ. 1973ರ ಏಪ್ರಿಲ್ 24ರಂದು ಜನಿಸಿದ ಅವರು 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ಬಹುತೇಕ ಎಲ್ಲ ಬ್ಯಾಟಿಂಗ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಮತ್ತು 34 ಸಾವಿರಕ್ಕೂ ಅಧಿಕ ರನ್ ಸಿಡಿಸಿರುವ ಸಚಿನ್ 2013ರಲ್ಲಿ ನಿವೃತ್ತಿ ಹೊಂದಿದ್ದರು.

ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಸಾಧಕರೆನಿಸಿರುವ ಸಚಿನ್ 1998ರಲ್ಲಿ ತಮ್ಮ 25ನೇ ಜನ್ಮದಿನದಂದು ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ದಿಗ್ಗಜ ಶೇನ್ ವಾರ್ನ್​ರನ್ನು ಬೆಂಡೆತ್ತಿ ಸಿಡಿಸಿದ ಶತಕ ಸ್ಮರಣೀಯವೆನಿಸಿದೆ. ‘ಡೆಸಾರ್ಟ್ ಸ್ಟಾಮ್ರ್’ ಹೆಸರಿನಲ್ಲಿ ಈಗಲೂ ಅಭಿಮಾನಿಗಳು ಅದನ್ನು ನೆನೆಸಿಕೊಳ್ಳುತ್ತಾರೆ.

ಮುಂಬೈನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಮೆಂಟರ್ ಆಗಿ ಸಚಿನ್ ಹಾಜರಿರಲಿದ್ದು ಇದೇ ವೇಳೆ ತಂಡ ದೊಂದಿಗೆ ಜನ್ಮದಿನದ ಸಂಭ್ರಮ ಆಚರಿಸುವ ನಿರೀಕ್ಷೆ ಇದೆ. ಇನ್ನು ಮಂಗಳವಾರ ಮಧ್ಯಾಹ್ನದ ನಂತರ ಸಚಿನ್ ತಮ್ಮ ‘100ಎಂಬಿ’ ಆಪ್ ಮೂಲಕ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

 

 

About the author

ಕನ್ನಡ ಟುಡೆ

Leave a Comment