ದೇಶ ವಿದೇಶ ಫ್ಯಾಷನ್

ಕ್ರಿಮಿಗಳಿಂದ ತಿನ್ನಲ್ಪಟ್ಟು ಮಾಜಿ ಮಾಡೆಲ್ ರೆಬೆಕಾ ಝೆನಿ ದುರಂತ ಸಾವು

ಟಿಬಿಲಿಸಿ (ಜಾರ್ಜಿಯಾ): ಜಾರ್ಜಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಜಿ ಮಾಡೆಲ್​ ರೆಬೆಕಾ ಝೆನಿ ತಾನು ಜೀವಂತವಿರುವಾಗಲೇ ಪರಾವಲಂಬಿ ಕ್ರಿಮಿಗಳಿಂದ ಕಚ್ಚಲ್ಪಟ್ಟು ಮೃತಪಟ್ಟಿದ್ದಾಳೆ.

ಮರಣೋತ್ತರ ಪರೀಕ್ಷೆ ನಂತರ ಈ ಆತಂಕಕಾರಿ ಸುದ್ದಿ ಹೊರಬಿದ್ದಿದ್ದು, ಝೆನಿ ಮೃತಪಟ್ಟಿರುವುದು ‘ ಕ್ರಿಮಿಗಳಿಂದಾಗಿ ರಕ್ತ ವಿಷವಾದಾಗ’ ಎಂಬುದು ಖಚಿತವಾಗಿದೆ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ಝೆನಿಯನ್ನು ಅವರ ಮಗಳೇ 2010ರಲ್ಲಿ ಆಸ್ಪತ್ರಗೆ ದಾಖಲಿಸಿದ್ದಳು. ಆಸ್ಪತ್ರೆಯ ಈ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡಿರುವ ಝೆನಿ ಕುಟುಂಬ ಆಸ್ಪತ್ರೆ ವಿರುದ್ಧ ದೂರು ದಾಖಲಿಸಲು ಮುಂದಾಗಿದೆ.

ಏನಿದು ಸ್ಕಾಬೀಸ್​ ಕ್ರಿಮಿ?
ಈ ಕ್ರಿಮಿ ಮಾನವನ ಕೈ ಮೇಲೆ ಜೀವಿಸಿ ಚರ್ಮದ ಮೇಲಿನ ಪದರದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ರಕ್ತ ವಿಷಗೊಂಡು ಸೋಂಕು ತಗುಲಿ ವ್ಯಕ್ತಿ ಮೃತ ಪಡುತ್ತಾನೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.

About the author

ಕನ್ನಡ ಟುಡೆ

Leave a Comment