ರಾಷ್ಟ್ರ

ಕ್ರಿಸ್ಟೋಫರ್‌ ನೊಲನ್‌- ಕಮಲಹಾಸನ್ ಭೇಟಿ

ನವದೆಹಲಿ: ಬ್ಯಾಟ್‌ ಮ್ಯಾನ್‌ ಚಿತ್ರ ಸರಣಿಯ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಅವರನ್ನು ಹಿರಿಯ ನಟ ಕಮಲ ಹಾಸನ್ ಭೇಟಿಮಾಡಿದ್ದಾರೆ. ಕ್ರಿಸ್ಟೋಫರ್‌ ನೊಲನ್‌ ಅವರ ಭೇಟಿಯ ಫೋಟೋವನ್ನು ನಟ ಕಮಲ ಹಾಸನ್‌ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

‘ರಿಫ್ರೇಮಿಂಗ್‌ ದಿ ಫೀಚರ್‌ ಆಫ್‌ ಫಿಲಂ’ ಕಾರ್ಯಕ್ರಮದ ನಿಮಿತ್ತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಮತ್ತು ವಿಷುವಲ್‌ ಆರ್ಟಿಸ್ಟ್‌ ಟಕಿಟಾ ದೀನ್‌ ಎರಡು ದಿನ ಭಾರತ ಪ್ರವಾಸಲ್ಲಿದ್ದಾರೆ. ನಟ–ನಿರ್ದೇಶಕ ಕಮಲ್‌ ಹಾಸನ್‌ ಶನಿವಾರ ನೊಲನ್‌ ಅವರನ್ನು ಭೇಟಿಮಾಡಿದ್ದಾರೆ. ‘ಅವರ ಡನ್‌ಕಿರ್ಕ್‌ ಸಿನಿಮಾವನ್ನು ಡಿಜಿಟಲ್‌ ಫಾರ್ಮ್ಯಾಟ್‌ನಲ್ಲಿ ನೋಡಿದ್ದಕ್ಕೆ ಕ್ಷಮೆಕೇಳಿ ಅದಕ್ಕೆ ಪ್ರತಿಯಾಗಿ ಹೇ ರಾಮ್‌ ಚಿತ್ರವನ್ನು ಡಿಜಿಟಲ್‌ ಫಾರ್ಮ್ಯಾಟ್‌ನಲ್ಲಿ ಅವರಿಗಾಗಿ ಕಳುಹಿಸುತ್ತಿದ್ದೇನೆ.

ಅವರು ಪಾಪನಾಸಂ ಚಿತ್ರವನ್ನು ನೋಡಿದ್ದಾರೆ ಎಂದು ತಿಳಿದು ಆಶ್ಚರ್ಯ ಉಂಟಾಯಿತು’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕಮಲ ಹಾಸನ್ ಮತ್ತು ನೊಲನ್ ಭೇಟಿಯಾದ ವಿಷಯ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ ಇಬ್ಬರು ಮಹಾ “ದಿಗ್ಗಜರುಗಳ ಸಂಗಮ” ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ ಅಭಿಮಾನಿಗಳು.

 

About the author

ಕನ್ನಡ ಟುಡೆ

Leave a Comment