ರಾಜ್ಯ ಸುದ್ದಿ

ಕ್ರಿಸ್ ಮಸ್ ಪ್ರಯುಕ್ತ 550 ಹೆಚ್ಚುವರಿ ಕೆಎಸ್ ಆರ್ ಟಿಸಿ ಬಸ್ಸುಗಳ ಕಾರ್ಯಾಚರಣೆ

ಬೆಂಗಳೂರು: ಕ್ರಿಸ್ ಮಸ್ ಪ್ರಯುಕ್ತ 550 ಹೆಚ್ಚುವರಿ ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ.
ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಿರುವ ಕೆಎಸ್ ಆರ್ ಟಿಸಿ  ಡಿಸೆಂಬರ್ 25 ರಂದು ಬೆಂಗಳೂರಿನಿಂದ ಇತರ ಕಡೆಗಳಿಗೆ ವಿಶೇಷ ಬಸ್ಸುಗಳ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಧರ್ಮಸ್ಛಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ. ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ. ಕೊಪ್ಪಳ, ಯಾದಗಿರ್, ಬೀದರ್, ಮತ್ತು ತಿರುಪತಿಗೆ ವಿಶೇಷ ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ ಎಂದು ಕೆಎಸ್ ಆರ್ ಟಿಸಿ ಹೇಳಿಕೆಯಲ್ಲಿ ತಿಳಿಸಿದೆ.ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾ ಪಟ್ಟಣ, ವಿರಾಜಪೇಟೆ, ಕುಶಾಲನಗರ, ಮತ್ತು  ಮಡಿಕೇರಿಗೆ , ಶಾಂತಿನಗರ ಬಸ್ ನಿಲ್ದಾಣದಿಂದ ಮಧುರೈ, ತ್ರಿಚಿ, ಚೆನ್ನೈ. ಕೊಯಂಬತ್ತೂರು,  ತಿರುಪತಿ, ವಿಜಯವಾಡ, ಹೈದ್ರಾಬಾದ್ ಮತ್ತಿತರ ಪ್ರದೇಶಗಳಿಗೆ ವಿಶೇಷ ಬಸ್  ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಇರುವ 707 ಕೌಂಟರ್ ಗಳು ಹಾಗೂ ಕೆಎಸ್ ಆರ್ ಟಿಸಿ ವೆಬ್ ಸೈಟ್ ಮೂಲಕ  ವಿಶೇಷ  ಬಸ್ಸು ಮುಂಗಡ ಟಿಕೆಟ್  ಕಾಯ್ದಿರಿಸಬಹುದಾಗಿದೆ ಎಂದು ಹೇಳಲಾಗಿದೆ.

About the author

ಕನ್ನಡ ಟುಡೆ

Leave a Comment