ರಾಜಕೀಯ

ಡಿಕೆಶಿ ಕ್ಷಮೆಯ ಹಿಂದೆ ದಂಡ ನಾಯಕನಾಗುವ ತಂತ್ರವಿದೆಯೇ

ಬೆಂಗಳೂರು: ಡಿಕೆಶಿಯ ಹೇಳಿಕೆಯ ಹಿಂದೆ ನಾನಾ ರಾಜಕೀಯ ಲೆಕ್ಕಾಚಾರ ಶುರುವಾಗಿದೆ. ಪರೋಕ್ಷವಾಗಿ ಸಿದ್ದರಾಮಯ್ಯ ಡಿಕೆಶಿಗೆ ಟಾಂಗ್‌ ನೀಡಿದ್ದಾರೆ.  ರಾಜ್ಯ ಕಾಂಗ್ರೆಸ್‌ನ ಭವಿಷ್ಯದ ನಾಯಕತ್ವಕ್ಕೆ ವೇದಿಕೆ ಸಜ್ಜುಗೊಳಿಸಲು ಹೊರಟಿರುವ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಹಿಂದಿನ ಸರಕಾರದ ಅವ-ಯಲ್ಲಿಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಪ್ರೋತ್ಸಾಹಿಸಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಪ್ರತಿಷ್ಠೆಯ ಕದನವಾಗಿರುವ ಉಪ ಚುನಾವಣೆ ಸಂದರ್ಭದಲ್ಲೇ ಡಿಕೆಶಿ ಇಂಥ ಹೇಳಿಕೆ ನೀಡಿರುವುದು ಕಾಂಗ್ರೆಸ್‌ನಲ್ಲಿ ತಲ್ಲಣ ಸೃಷ್ಟಿಸಿದೆ.

ಈ ಬಾರಿಯ ವಿಧಾನಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿನಾಯಕತ್ವದ ಪೈಪೋಟಿ ಶುರುವಾಗಿದೆ. ಹಲವು ನಾಯಕರು ಈ ನಿಟ್ಟಿನಲ್ಲಿಸಾಮಥ್ರ್ಯ ರುಜುವಾತು ಪಡಿಸುವ ಯತ್ನದಲ್ಲಿದ್ದಾರೆ. ಈ ವಿಚಾರದಲ್ಲಿಡಿಕೆಶಿ ಮುಂಚೂಣಿಯ ಓಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇಂಥ ಜಟಾಪಟಿ ನಡುವೆಯೂ ತಮ್ಮ ಮಹತ್ವಕ್ಕೆ ಕುತ್ತು ಬಂದಿಲ್ಲಎಂಬುದನ್ನು ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಜಾರಿಯಲ್ಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿತಮ್ಮ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಲು ವಿವಾದಗ್ರಸ್ತ ಲಿಂಗಾಯತ ಧರ್ಮದ ವಿಚಾರವನ್ನು ಡಿಕೆಶಿ ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಕಾಂಗ್ರೆಸ್‌ ಸರಕಾರದ ಅವ–ಯಲ್ಲಿಇಂತಹ ಹೋರಾಟಕ್ಕೆ ಇಂಬು ನೀಡಬಾರದಿತ್ತೆಂದು ನೇರವಾಗಿ ಹೇಳಿರುವ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೇ ಟಾಂಗ್‌ ಕೊಟ್ಟಿದ್ದಾರೆ.

ಲಕ್ಷ್ಮೇಶ್ವರದ ರಂಭಾಪುರಿ ಮಠದಲ್ಲಿನಡೆದ ಸಮಾರಂಭದಲ್ಲಿ ಭಾಗಿಯಾದ ಡಿಕೆಶಿ, ಅಚಾನಕ್‌ ಆಗಿ ಹೇಳಿದ್ದಲ್ಲ. ಅವರು ಹಾಗೆ ಬಾಯಿ ತಪ್ಪಿ ಮಾತಾಡಿದ್ದರೆ ಇಷ್ಟೊತ್ತಿಗಾಗಲೇ ತೇಪೆ ಹಚ್ಚುವ ಕೆಲಸ ಮಾಡಿರುತ್ತಿದ್ದರು. ಬದಲಾಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಅವರು ಒಂದೇ ಕಲ್ಲಿನಲ್ಲಿಹಲವು ಹಕ್ಕಿಗಳತ್ತ ಗುರಿಯಿಟ್ಟಿದ್ದಾರೆ. ಯಾಕೆಂದರೆ, ಸಿದ್ದು ನಂತರದಲ್ಲಿರಾಜ್ಯ ಕಾಂಗ್ರೆಸ್‌ನಲ್ಲಿಹಿಡಿತ ಸಾ-ಸಲು ಮುಂದಾದವರ ಪಟ್ಟಿಯಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಅವರೂ ಇದ್ದಾರೆ. ಲಿಂಗಾಯತ ಹೋರಾಟವನ್ನು ಮುನ್ನಡೆಸಿದ್ದ ಎಂ.ಬಿ. ಪಾಟೀಲ್‌ ಜತೆಗೆ ವಿನಯ್‌ ಕುಲಕರ್ಣಿ ಸೇರಿ ಸಮುದಾಯದ ಪ್ರಮುಖರು ನಿಂತಿದ್ದರು. ಈ ಎಲ್ಲರೂ ಶಿವಕುಮಾರ್‌ ಹೇಳಿಕೆಯಿಂದ ಗರಂ ಆಗುವಂತಾಗಿದೆ. ಪಾಟೀಲ್‌ ಹಾಗೂ ಕುಲಕರ್ಣಿ ನೇರವಾಗಿಯೇ ಡಿಕೆಶಿ ಅವರನ್ನು ತರಾಟೆಗೆ ತೆಗೆದುಕೊಂರೆ.

About the author

ಕನ್ನಡ ಟುಡೆ

Leave a Comment