ಜೀವನ ಶೈಲಿ

ಖುಷಿ ಮನಸಿಗೆ ವಾಯುವಿಹಾರ

ನೀವು ದಿನವಿಡೀ ಫ್ರೆಶ್‌ ಆಗಿ ಇರ್ತೀರಲ್ಲಾ? ಅದು ಹೇಗೆ’ ಎಂದು ನನ್ನ ಸ್ನೇಹಿತರೊಬ್ಬರು ಕೇಳಿದರು.  ಓ ಅದಾ… ಓಪನ್‌ ಸೀಕ್ರೇಟ್‌. ಮಾರ್ನಿಂಗ್‌ ವಾಕ್‌’ ಅಂದೆ

ಬರೀ ವಾಕಿಂಗ್‌ ಮಾಡೋದ್ರಿಂದನಾ…’ ಅಂತ ರಾಗ ತೆಗೆದರು. ‘ಹೂಂ’ ಎಂದು ತಲೆಯಾಡಿಸಿದೆ. ಅವರ ಕುತೂಹಲ, ಆಸಕ್ತಿಗೆ ಸೋತು ಬೆಳಗಿನ ವಾಯುವಿಹಾರದಿಂದ ನಮಗಾಗುವ ಪ್ರಯೋಜನಗಳನ್ನು ಹಂತಹಂತವಾಗಿ ವಿವರಿಸಬೇಕಾಯಿತು.

ನಾವು ದಿನಪೂರ್ತಿ ಲವಲವಿಕೆಯಿಂದ ಇರಬೇಕೆಂದರೆ ರಾತ್ರಿಹೊತ್ತು ನಿದ್ದೆ ಚೆನ್ನಾಗಿ ಮಾಡಬೇಕು. ಮನುಷ್ಯನಿಗೆ ನಿದ್ದೆ ಸರಿಯಾಗಿ ಆಗಿಲ್ಲ ಅಂದರೆ ತಲೆ ಭಾರ ಎನಿಸುತ್ತದೆ. ಆಲಸ್ಯವೂ ಸಹಜ. ತಲೆಭಾರ ಮುಂದುವರಿದು ಮೈಗ್ರೇನ್‌ಗೆ ಜಾರಿತೆಂದರೆ ಆ ದಿನವೇನು; ಕನಿಷ್ಠ ಎರಡು ಮೂರು ದಿನಗಳೇ ಬೇಕು ಸುಧಾರಿಸಿಕೊಳ್ಳಲು. ಇಷ್ಟೆಲ್ಲ ಪಾಡು ಪಡುವ ಬದಲು ನಿದ್ದೆಯೊಂದನ್ನು ಸರಿಯಾಗಿ ಮಾಡಿಬಿಟ್ಟರೆ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ.

ಬೆಳಗಿನ ವೇಳೆ ವಾಯುವಿಹಾರವನ್ನು ತಪ್ಪಿಸದೇ ರೂಢಿಸಿಕೊಂಡಲ್ಲಿ ನಿದ್ರಾಹೀನತೆ ಸಹಿತ ನಿದ್ದೆಯ ಹಲವು ಸಮಸ್ಯೆಗಳನ್ನು ದೂರವಿಡಬಹುದು.

ಇಡೀ ಶರೀರಕ್ಕೆ ಉತ್ತಮ ವ್ಯಾಯಾಮ ನೀಡುವ ಒಳ್ಳೇ ಹವ್ಯಾಸ ಇದು. ಬೆಳಗಿನ ವೇಳೆ ವಾಕಿಂಗ್‌ಗೆ ಹೇಳಿ ಮಾಡಿಸಿದ ಸಮಯ. ಒಂದು ದೊಡ್ಡ ಲೋಟದಲ್ಲಿ ಕುಡಿಯಲು ಸಾಧ್ಯವಾಗುವಷ್ಟು ಬಿಸಿನೀರಿಗೆ ಒಂದು ಹೊಳು ನಿಂಬೆಹಣ್ಣು ಹಿಂಡಿ ಖಾಲಿ ಹೊಟ್ಟೆಯಲ್ಲಿ ಕುಡಿದು ನಡೆಯಲು ಆರಂಭಿಸಬೇಕು. ಅತ್ತ ಬಿರುಸೂ ಅಲ್ಲದ, ಇತ್ತ ನಿಧಾನವೂ ಅಲ್ಲದ ಒಂದಳತೆಯಲ್ಲಿ ನಡೆಯಬೇಕು. ಹೀಗೆ ನಡೆಯುವಾಗ ಮನಸ್ಸಿನಲ್ಲಿ ಏನೇನೋ ಯೋಚಿಸುವುದ ಬಿಟ್ಟು ಪ್ರಕೃತಿಯೆಡೆಗೆ ಪೂರ್ಣ ಗಮನ ಹರಿಸಿರಿ.

About the author

ಕನ್ನಡ ಟುಡೆ

Leave a Comment