ಸಿನಿ ಸಮಾಚಾರ

ಖ್ಯಾತ ನಟನಿಗೆ ಕಪಾಳಮೋಕ್ಷ ಮಾಡಿದ್ದೆ  ರಾಧಿಕಾ ಆಪ್ಟೆ

ಮುಂಬೈ: ಭಾರತೀಯ ಚಿತ್ರರಂಗದ ಗ್ಲಾಮರಸ್ ನಟಿ ರಾಧಿಕಾ ಆಪ್ಟೆ ತಾವು ದಕ್ಷಿಣ ಭಾರತದ ಖ್ಯಾತ ನಟರೊಬ್ಬರ ಕೆನ್ನೆಗೆ ಬಾರಿಸಿದ್ದೆ ಎಂದು ಹೇಳಿದ್ದು ಇದೀಗ ಚರ್ಚೆಗೆ  ಕಾರಣವಾಗಿದೆ.

ರಾಧಿಕಾ ಆಪ್ಟೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ದಕ್ಷಿಣದಲ್ಲಿ ನನ್ನ ಮೊದಲ ಚಿತ್ರವಾಗಿತ್ತು. ಮೊದಲ ದಿನದ ಚಿತ್ರೀಕರಣದಲ್ಲಿ ಆ ನಟ ನನ್ನ ಪಕ್ಕದಲ್ಲಿ ಬಂದು ಕುಳಿತರು. ನಂತರ ತನ್ನ ಕಾಲಿನಿಂದ ನನ್ನ ಕಾಲಿಗೆ ಉಜ್ಜಿ ಅಸಭ್ಯವಾಗಿ ನಡೆದುಕೊಂಡರು. ಕೂಡಲೇ ನಾನು ಆತನ ಕೆನ್ನೆಗೆ ಬಾರಿಸಿದೆ ಅಂತಾ ರಾಧಿಕಾ ಹೇಳಿಕೊಂಡಿದ್ದಾರೆ.

 

About the author

ಕನ್ನಡ ಟುಡೆ

Leave a Comment