ಸಿನಿ ಸಮಾಚಾರ

ಖ್ಯಾತ ನಿರ್ದೇಶಕ ಸಿ.ವಿ. ರಾಜೇಂದ್ರನ್ ವಿಧಿವಶ

ಚೆನ್ನೈ: ಖ್ಯಾತ ನಿರ್ದೇಶಕ ಸಿವಿ ರಾಜೇಂದ್ರನ್ (81) ಅವರು ಭಾನುವಾರ ವಿಧಿವಶರಾಗಿದ್ದಾರೆಂದು ತಿಳಿದುಬಂದಿದೆ. ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಅಭಿನಯದ ತ್ರಿಮೂರ್ತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದ ರಾಜೇಂದ್ರನ್ ಅವರು ದೀರ್ಘಾಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಮಿಯಾಟ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಿಗ್ಗೆ 8 ಗಂಟೆಗೆ ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ.

ತ್ರಿಮೂರ್ತಿ ಸಿವಿ. ರಾಜೇಂದ್ರನ್ ಅವರು ನಿರ್ದೇಶಿಸಿದ ಕನ್ನಡದ ಮೊದಲ ಸಿನಿಮಾವಾಗಿದೆ. ಇದಾದ ಬಳಿಕ ಡಾ.ವಿಷ್ಣುವರ್ಧನ್, ಗಲಾಟೆ ಸಂಸಾರ, ದ್ವಾರಕೀಶ್ ನಿರ್ಮಾಣದ ಕಿಟ್ಟು-ಪುಟ್ಟು, ಸಿಂಗಾಪುರದಲ್ಲಿ ರಾಜಾಕುಳ್ಳ, ಪ್ರೀತಿ ಮಾಡು ತಮಾಷೆ ನೋಡು, ಘರ್ಜನೆ ಸೇರಿದಂತೆ ವಿವಿಧ ಚಿತ್ರಗಳನ್ನು ನಿರ್ದೇಶಿಸಿದ್ದರು.

 

About the author

ಕನ್ನಡ ಟುಡೆ

Leave a Comment