ಸಂಗೀತ

ಖ್ಯಾತ ಹಿನ್ನೆಲೆ ಗಾಯಕಿ ಕೆ. ರಾಣಿ ಇನ್ನಿಲ್ಲ

ಹೈದರಾಬಾದ್: ಖ್ಯಾತ ಹಿನ್ನೆಲೆಗಾಯಕಿ ಕೆ. ರಾಣಿ (75) ಶುಕ್ರವಾರ ( (ಜು.13) ರಾತ್ರಿ ವಿಧಿವಶರಾದರು. ಕನ್ನಡದ ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ಗಾಳಿಗೋಪುರ, ರತ್ನಮಂಜರಿ ಸೇರಿ ಅನೇಕ ಚಿತ್ರಗಳಲ್ಲಿ ಹಾಡಿದ್ದ ರಾಣಿ ಹೈದರಾಬಾದ್ ಕಲ್ಯಾಣನಗರದ ನಿವಾಸದಲ್ಲಿ ನಿಧನರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಳ, ಬಂಗಾಳಿ ಮಲಯಾಳಂ ಮತ್ತು ಉಜ್ಬೇಕ್  ಭಾಷೆಗಳಲ್ಲಿ ಹಾಡುತ್ತಿದ್ದ ಗಾಯಕಿ ಕೆ. ರಾಣಿ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸಿಂಹಳ ಹಾಗು ಉಜ್ಬೇಕ್ ಭಾಷೆಗಳಲ್ಲಿ ಹಾಡಿದ್ದ ಭಾರತದ  ಮೊದಲ ಮಹಿಳಾ ಗಾಯಕಿ ಎನ್ನುವ ಕೀರ್ತಿ ರಾಣಿ ಅವರದಾಗಿತ್ತು. 500 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದ ರಾಣಿ  ಶ್ರೀಲಂಕಾದ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಹೆಸರಾಗಿದ್ದರು.
ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮುಂದೆ ಕಾರ್ಯಕ್ರಮ ನಿಡಿದ್ದ ಗಾಯಕಿ ರಾಣಿಯವರನ್ನು ಕೆ. ಕಾಮರಾಜ್ ಇನ್ನಿಸೈ ರಾಣಿ ಎಂದು ಕೊಂಡಾಡಿದ್ದರು. ಮೋಕ್ಷಗುಂಡಮ್ ವಿಶ್ವೇಶ್ವರಯ ಶತಮಾನೋತ್ಸವದಲ್ಲಿ ಭಾಗವಹಿಸಿ ಹಾಡುವಂತೆ ಕರ್ನಾಟಕ ಸರ್ಕಾರ ರಾಣಿಯವರಿಗೆ ಆಹ್ವಾನ ನಿಡಿತ್ತು. ವಿಶೇಷವೆಂದರೆ ಕಾರ್ಯಕ್ರಮಕ್ಕೆ ಆಗಮಿಸಲು ರಾಣಿಯವರಿಗೆ ಸರ್ಕಾರವೇ ವಿಶೇಷ ವಿಮಾನವನ್ನೂ ವ್ಯವಸ್ಥೆ ಮಾಡಿತ್ತು. ಕಾರ್ಯಕ್ರಮವೊಂದರಲ್ಲಿ ರಾಣಿ ಹಾಡಿದ್ದ ಹಿಂದಿ ಗೀತೆಗಳಾದ  “ಒ ಮೈನೆ ಪ್ಯಾರ್ ಕಿಯಾ, ಮಾ ಕ್ಯಾ ಕರು ರಾಮ್ ಮುಝೆ ಬಡ್ಡ ಮಿಲ್ ಗಯಾ”,ಗಳಿಗೆ ಸ್ವತಃ ರಾಜ್ ಕಪೂರ್ ಸಂಗೀತ ಸಂಯೋಜನೆ ಮಾಡಿದ್ದರು.

About the author

ಕನ್ನಡ ಟುಡೆ

Leave a Comment