ರಾಜ್ಯ ಸುದ್ದಿ

ಗಂಗಾ ಕಲ್ಯಾಣ ಯೋಜನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ವಿಧಾನ ಪರಿಷತ್ ನಲ್ಲಿ ಬಿಜೆಪಿ ಪ್ರತಿಭಟನೆ

ಬೆಳಗಾವಿ: ಗಂಗಾ ಕಲ್ಯಾಮ ಯೋಜನೆಯಲ್ಲಿ ಅಧಿಕಾರಿಗಲು ನಿರ್ಲಕ್ಷ್ಯ ತೋರುತ್ತಿರುವ ಹಿನ್ನಲೆಯಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿತು.
ಯೋಜನೆಗೆ ಸಂಬಂಧಿಸಿದಂತೆ ಇಲಾಖಾ ತನಿಖೆಗೆ ಉನ್ನತ ಮಟ್ಟದ ಅಧಿಕಾರಿಗಳ ಸಚಿತಿ ರಚಿಸುವುದಾಗಿ ಸಚಿವ ಪ್ರಿಯಾಂಕ ಖರ್ಗೆಯವರು ಭರವಸೆ ನೀಡಿದರು. ಆದರೂ, ತನಿಖೆಗೆ ಸದನ ಸಮಿತಿಯನ್ನೇ ರಚಿಸಬೇಕೆಂದು ಬಿಜೆಪಿ ನಾಯಕರು ಪಟ್ಟು ಹಿಡಿದರು. ಇದರ ಪರಿಣಾಮ ಅರ್ಧ ಗಂಟೆಗಳ ಕಾಲ ಕಲಾಪವನ್ನು ಸಭಾಪತಿಗಳು ಮುಂದೂಡಿದರು. ಬಳಿಕ ಮತ್ತೆ ಕಲಾಪ ಆರಂಭವಾದಾಗ ಈ ವಿಚಾರ ಕುರಿತು ಚರ್ಚೆಗೆ ಬುಧವಾರ ಅರ್ಧ ಗಂಟೆಗಳ ಕಾಲ ಸಮಯಾವಕಾಶ ಕೊಡುವುದಾಗಿ ತಿಳಿಸಿದರು. ನಂತರ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆದರು.

About the author

ಕನ್ನಡ ಟುಡೆ

Leave a Comment