ಸುದ್ದಿ

ಗಂಡು ಮಗು ಹೆರಲಿಲ್ಲ ಅಂತಾ ಪತ್ನಿಯನ್ನೇ ಬೆಂಕಿ ಹಚ್ಚಿ ಕೊಂದ ಪಾಪಿ

ಮೈಸೂರು: ಗಂಡು ಮಗು ಹೆರಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಕೊಂದಿದ್ದಾನೆ ಇಲ್ಲೊಬ್ಬ ಪಾಪಿ ಪತಿ. ತಿ.ನರಸೀಪುರದ ಹೊಸಳ್ಳಿ ಗ್ರಾಮದ ಕಾಂತರಾಜು ತನ್ನ ಪತ್ನಿ ಪೂಜಾ (24)ಳನ್ನು ಹತ್ಯೆ ಗೈದಿದ್ದಾನೆ.

ವರುಣ ಹೋಬಳಿ ಹಡಜನ ಗ್ರಾಮದ ಪೂಜಾ 9 ವರ್ಷದ ಹಿಂದೆ ಕಾಂತರಾಜುನನ್ನು ವಿವಾಹವಾಗಿದ್ದಳು. ಈಗಾಗಲೇ ಮೂವರು ಪುತ್ರಿಯರು ಇದ್ದಾರೆ. ಈ ಬಾರಿಯೂ ಹೆಣ್ಣುಮಗುವೇ ಹುಟ್ಟಿದ್ದಕ್ಕೆ ಸಿಟ್ಟಿಗೆದ್ದು ಪತ್ನಿಯ ಪ್ರಾಣ ತೆಗೆದಿದ್ದಾನೆ. ಪೂಜಾ ಗಂಡನ ಮನೆಯವರಿಂದ ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದ್ದಳು. ಘಟನೆ ಬಳಿಕ ಕಾಂತರಾಜು ಹಾಗೂ ಆತನ ಕುಟುಂಬದವರು ನಾಪತ್ತೆಯಾಗಿದ್ದಾರೆ.

About the author

ಕನ್ನಡ ಟುಡೆ

Leave a Comment