ರಾಜಕೀಯ

ಗಂಡ ಸತ್ತು ತಿಂಗಳು ಆಗಿಲ್ಲ, ಆಗಲೆ ರಾಜಕೀಯಕ್ಕೆ ಬಂದಿದ್ದಾರೆ: ಸುಮಲತಾ ವಿರುದ್ಧ ಎಚ್.ಡಿ.ರೇವಣ್ಣ ಅವಮಾನಕಾರಿ ಹೇಳಿಕೆ

 

ಬೆಂಗಳೂರು: ಗಂಡ ಸತ್ತು ತಿಂಗಳಾಗಿಲ್ಲ, ಆಗಲೇ ಸುಮಲತಾ ಅಂಬರೀಷ್ ರಾಜಕೀಯಕ್ಕೆ ಬಂದಿದ್ದಾರೆ ಎಂದು ಸಚಿವ ಎಚ್.ಡಿ ರೇವಣ್ಣ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ಡಿ ರೇವಣ್ಣ, ಸುಮಲತಾ ಅವರು ಚಾಲೆಂಜ್ ಮಾಡಿದ್ದರಿಂದ ನಾವು ನಿಖಿಲ್ ಕುಮಾರ್ ನನ್ನು ಕಣಕ್ಕಿಳಿಸಬೇಕಾಯಿತು, ಇದಲ್ಲದಿದ್ದರೇ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುತ್ತಿರುವುದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ. ಇನ್ನೂ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಮಲತಾ, ಅವರ ಮಾತುಗಳು ಅವರ ಸಂಸ್ಕಾರವನ್ನು ಬಿಂಬಿಸುತ್ತದೆ.  ನಾವು ಯಾವುತ್ತೂ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೇಲೆ ಅಪಾರ ವಿಶ್ವಾಸವಿದೆ. ಹೀಗಾಗಿ ರೇವಣ್ಣ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಜನರೇ ಅಂತಿಮಾ ತೀರ್ಮಾನ ಮಾಡುತ್ತಾರೆ. ಎಲ್ಲರು ಒಂದೇ ರೀತಿ ಇರುವುದಿಲ್ಲ, ಅಂಬರೀಶ್ ಎಲ್ಲರನ್ನು ಪ್ರೀತಿಯಿಂದ ನೋಡುತ್ತಿದ್ದರು ಎಂದು ಸುಮಲತಾ ಪ್ರತಿಕ್ರಿಯಿಸಿದ್ದಾರೆ.

About the author

ಕನ್ನಡ ಟುಡೆ

Leave a Comment