ರಾಷ್ಟ್ರ ಸುದ್ದಿ

ಗಜ ಚಂಡಮಾರುತ: ಕೇಂದ್ರದಿಂದ 14,910 ಕೋಟಿ ರು. ನೆರವು ಕೇಳಿದ ತಮಿಳುನಾಡು

ಚೆನ್ನೈ: ಗಜ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು 14,910 ಕೋಟಿ ರುಪಾಯಿ ನೆರವು ನೀಡುವಂತೆ ತಮಿಳುನಾಡು ಸರ್ಕಾರ ಗುರುವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ಸಂಬಂಧ ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು, ರಾಜ್ಯಕ್ಕೆ 14,910 ಕೋಟಿ ರುಪಾಯಿ ಆರ್ಥಿಕ ನೆರವು ನೀಡುವಂತೆ ಮತ್ತು ತಕ್ಷಣ 1,431 ಕೋಟಿ ರುಪಾಯಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಉಂಟಾದ ನಷ್ಟದ ಬಗ್ಗೆ ನಿರ್ಣಯಿಸಲು ಕೇಂದ್ರ ತಂಡ ಕಳುಹಿಸುವುದಾಗಿ ಪ್ರಧಾನಿ ಮೋದಿ ಅವರು ಪಳನಿಸ್ವಾಮಿ ಅವರಿಗೆ ಭರವಸೆ ನೀಡಿದ್ದಾರೆ. ಶಾಶ್ವತ ಪುನರ್ ನಿರ್ಮಾಣ ಕಾರ್ಯಗಳಿಗೆ 14,910 ಕೋಟಿ ರು. ಕೃಷಿ ಮತ್ತು ತೋಟಗಾರಿಕೆ ನಷ್ಟ ಪರಿಹಾರಕ್ಕೆ 625 ಕೋಟಿ ರುಪಾಯಿ ಮತ್ತು ತಕ್ಷಣ 1,431 ಕೋಟಿ ರುಪಾಯಿ ಪರಿಹಾರ ನೀಡುವಂತೆ ತಮಿಳುನಾಡು ಸಿಎಂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

About the author

ಕನ್ನಡ ಟುಡೆ

Leave a Comment