ರಾಷ್ಟ್ರ ಸುದ್ದಿ

ಗಡಿಯಲ್ಲಿ ಗುಂಡಿನ ಚಕಮಕಿ: 3 ದಿನದಲ್ಲಿ 20 ಬಾರಿ ಕದನವಿರಾಮ ಉಲ್ಲಂಘಿಸಿದ ಪಾಕ್

ಶ್ರೀನಗರ: ಭಾರತ ವಾಯುಪಡೆ ಪಾಕಿಸ್ತಾನದಲ್ಲಿನ ಉಗ್ರರ ಸಂಹಾರ ಮಾಡಿದ್ದ ಬಳಿಕವೂ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಗುಂಟ ಕದನ ವಿರಾಮ ಉಲ್ಲಂಘಿಸಿ ತನ್ನ ಪುಂಡಾಟಿಕೆ ಮುಂದುವರಿಸಿದೆ. ಕಳೆದ ಮೂರು ದಿನಗಳಿಂದ ಸತತ 20 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಗುರುವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಪಾಕ್ ಪಡೆಗಳು ಭಾರತ್ದ ಮೇಲೆ ಗುಂಡಿನ ದಾಳಿ ನಡೆಸಿದೆ. ಆದರೆ ಈ ದಾಳಿಯಲ್ಲಿ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಅಲ್ಲದೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದೂ ವರದಿಯಾಗಿದೆ. ಪಾಕ್ ಗುರುವಾರ ಬೆಳಿಗ್ಗೆ ಗಡಿ ಗುಂಟ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೆಂದ್ರ ಆನಂದ್  ಹೇಳಿದ್ದಾರೆ. ಭಾರತ ಏರ್ ಸ್ಟ್ರೈಕ್ ಬಳಿಕ ಎರಡೂ ದೇಶದ ನಡುವೆ ಯುದ್ಧ ವಾತಾವರಣ ನಿರ್ಮಾಣವಾಗಿದೆ. ಈ ನಡುವೆಯೇ ಪುಂಡ ಪಾಕಿಸ್ತಾನ ಮಾತ್ರ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಕಾಲ್ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ. ಇಂದಿನ ಗುಂಡಿನ ದಾಳಿ ಬಳಿಕ ಪೂಂಛ್, ರಜೌರಿ, ಸಾಂಬಾ ಜಿಲ್ಲೆ, ಗಡಿ ನಿಯಂತ್ರಣಾ ರೇಖೆ ಸುತ್ತಮುತ್ತ ಐದು ಕಿಮೀ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳನ್ನುಮುಚ್ಚಲಾಗಿದೆ

About the author

ಕನ್ನಡ ಟುಡೆ

Leave a Comment