ರಾಷ್ಟ್ರ ಸುದ್ದಿ

ಕಾಶ್ಮೀರದ ಪೂಂಚ್ ಗಡಿಯಲ್ಲಿ ಮುಂದುವರೆದ ಪಾಕ್ ಸೇನೆ ಪುಂಡಾಟ

ಪೂಂಚ್ (ಜಮ್ಮು ಕಾಶ್ಮೀರ): ಪಾಕ್ ಆಕ್ರಮಿತ  ಕಾಶ್ಮೀರದ ಪೂಂಚ್ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಶೆಲ್ ದಾಳಿಯಿಂದಾಗಿ 9 ತಿಂಗಳ ಮಗು ಹಾಗೂ ಅದರ ತಾಯಿ ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ, ಪೂಂಚ್ ನಲ್ಲಿ ನಡೆದ ಗುಂಡಿನ ದಾಳಿಗೆ ಮತ್ತೊಬ್ಬರಿಗೆ ತೀವ್ರತರವಾದ ಗಾಯಗಳಾಗಿವೆ, ರುಬಾನಾ ಕೋಸರ್ ಆಕೆಯ 5 ವರ್ಷದ ಮಗ ಪಜಾನ್ ಹಾಗು 9 ತಿಂಗಳ ಹೆಣ್ಣು ಮಗು ಶಬನಂ ಸಾವನ್ನಪ್ಪಿದ್ದಾರೆ, ಪಾಕಿಸ್ತಾನ ಸೇನೆ ಈ ಪ್ರದೇಶದ ನಾಗರಿಕರನ್ನು ಗುರಿಯಾಗಿಸಿಕೊಂಡು ನಿನ್ನೆ ರಾತ್ರೀಯಿಡಿ ಭಾರೀ ಶೆಲ್ ದಾಳಿ ನಡೆಸಿದೆ ಎಂದು ತಿಳಿಸಿರುವ ಪೊಲೀಸರು ಭಾರತೀಯ ಭದ್ರತಾ ಪಡೆ ಕೂಡ ತಕ್ತ ಉತ್ತರ ನೀಡಿದೆ. ಗಡಿ ನಿಯಂತ್ರಣ ರೇಖೆ ಬಳಿಯಿರುವ ಸಲ್ಲೋತ್ರಿ ಗ್ರಾಮದಲ್ಲಿ  ಗುಂಡಿನ ದಾಳಿ ನಡೆದಿತ್ತು, ಇದರಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದರು.

About the author

ಕನ್ನಡ ಟುಡೆ

Leave a Comment