ಸಿನಿ ಸಮಾಚಾರ

ಗತವೈಭವವನ್ನು ಸೃಷ್ಟಿಸಲಿದ್ದಾರೆ ಕೆಜಿಎಫ್‌ ಚಿತ್ರಕ್ಕಾಗಿ  ನಿರ್ದೇಶಕ ಪ್ರಶಾಂತ್‌ ನೀಲ್‌.

ಬೆಂಗಳೂರು.:ಯಶ್ ‘ಕೆಜಿಎಫ್‌’ ಸಿನಿಮಾ ಮತ್ತೆ ಸದ್ದು ಮಾಡುತ್ತಿದೆ. ಎಂಬತ್ತರ ದಶಕವನ್ನು ಮರುಸೃಷ್ಟಿಸಲು ನಾನಾ ತಂತ್ರಗಳನ್ನು ಬಳಸಿದ್ದಾರೆ ನಿರ್ದೇಶಕ ಪ್ರಶಾಂತ್‌ ನೀಲ್‌. ಜತೆಗೆ ಕೆಜಿಎಫ್‌ನ ವೈಭವವನ್ನು ಮತ್ತಷ್ಟು ನೈಜವಾಗಿಸಲು ವಿದೇಶದಿಂದ ಕಲರಿಸ್ಟ್‌ ಕೂಡ ಬರುತ್ತಿರುವುದು ವಿಶೇಷ.ಕೆಜಿಎಫ್‌ ಒಂದು ಕಾಲದಲ್ಲಿ ಗತ ವೈಭವ ಕಂಡ ಪ್ರದೇಶ.  ಮತ್ತೆ ಗತಕಾಲವನ್ನು ನೆನಪಿಸಲು ಉತ್ತಮ ತಂತ್ರಜ್ಞಾನ ಬಳಸಿದ್ದಾರೆ ಚಿತ್ರದ ನಿರ್ದೇಶಕ ಪ್ರಶಾಂತ್‌.

ಸಿನಿಮಾ ಕುರಿತು ನಿರ್ದೇಶಕರು ಹೇಳುವುದು ಹೀಗೆ, ‘ಕೆಜಿಎಫ್‌ಗೂ ಸಿನಿಮಾಗೂ ಸಂಬಂಧವಿದೆ. ಎಂಬತ್ತರ ದಶಕದಲ್ಲಿ ನಡೆದ ಸ್ಟೋರಿಯನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಹಾಗಾಗಿ ಅಂದು ಈ ಪ್ರದೇಶದ ಜನರ ಜೀವನ ಶೈಲಿ ಹೇಗಿತ್ತೋ ಅದನ್ನು ಹಾಗೆಯೇ ಸೆರೆ ಹಿಡಿಯುತ್ತಿದ್ದೇವೆ.

‘ಕೆಜಿಎಫ್‌ ಬೇರೆ ತರಹದ ಸಿನಿಮಾ. ಹಾಗಾಗಿ ಈ ಯೋಜನೆಗೆ ಹೊಸ ರೀತಿಯ ಮೇಕಿಂಗ್‌ ಸ್ಟೈಲ್‌ ಬೇಕಾಗಿದೆ.ಇನ್ನು ಕೆಜಿಎಫ್‌ಗಾಗಿ ಕಲರಿಂಗ್‌ ಮಾಡಿಸುತ್ತಿದ್ದೇವೆ. ಅದು ಬೇರೆ ರೀತಿಯಲ್ಲಿರುತ್ತದೆ. ಈ ಕೆಲಸ ಮಾಡುವುದಕ್ಕಾಗಿಯೇ ವಿದೇಶದಿಂದ ಕಲರಿಸ್ಟ್‌ ಬರುತ್ತಿದ್ದಾರೆ. ಕಲರಿಸ್ಟ್‌ಗೆ ಕೆಲಸ ಕಮ್ಮಿ ಇದ್ದರೂ ಕ್ವಾಲಿಟಿ ಕಾರಣದಿಂದಾಗಿ ವಿದೇಶದಿಂದ ತಂತ್ರಜ್ಞರನ್ನು ಕರೆಯಿಸುತ್ತಿದ್ದೇವೆ. ಇದೊಂದು ಸಮಾಜಮುಖಿ ಇರುವ ಕಮರ್ಷಿಯಲ್‌ ಸಿನಿಮಾ. ಅಷ್ಟೇ ಜವಾಬ್ದಾರಿಯಿಂದ ನಾವೂ ಸಿನಿಮಾ ಮಾಡಿದ್ದೇವೆ’ ಎಂದು ಹೇಳಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.

 

About the author

ಕನ್ನಡ ಟುಡೆ

Leave a Comment