ಸಾಂಸ್ಕ್ರತಿಕ

ಗದಗ: 11ನೇ ಶತಮಾನದ ಚಾಲುಕ್ಯ ಯುಗದ ಶಿಲ್ಪ ಕಲಾಕೃತಿಗಳು ಪತ್ತೆ

ಲಕ್ಕುಂಡಿ: ಗದಗ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕಲಾಕೃತಿಗಳು 11 ಶತಮಾನದ ಚಾಲುಕ್ಯ ಯುಗಕ್ಕೆ ಕರೆದೊಯ್ಯುತ್ತವೆ. ಭಾನುವಾರ ಸಂಜೆ ಶೌಚಾಲಯಕ್ಕಾಗಿ ಗುಂಡಿ ತೋಡುತ್ತಿರುವಾಗ ಕಲ್ಯಾಣಿ ಚಾಲುಕ್ಯರ ಯುಗದ ಜೈನ ಶಿಲ್ಪಕಲಾಕೃತಿಗಳು ಪತ್ತೆಯಾಗಿವೆ, ಗದಗದಿಂದ 12 ಕಿಮೀ ದೂರದಲ್ಲಿರುವ ಲಕ್ಕುಂಡಿ ಒಂದು ಐತಿಹಾಸಿಕ ಗ್ರಾಮ, ಇಲ್ಲಿ ಚಾಲುಕ್ಯ ಸಂಸ್ಕೃತಿಯ ಪರಂಪರೆ ಹಾಗೂ ಬಾವಿಗಳಿವೆ, ಇವುಗಳನ್ನು ಕಲ್ಯಾಣಿಗಳು ಎಂದು ಕರೆಯಲಾಗುತ್ತದೆ. ನಾಗನಾಥ ದೇವಾಲಯದ ಬಳಿ ಚಾಲುಕ್ಯ ಯುಗದ ಶಿಲ್ಪ ಕಲೆಗಳು ಪತ್ತೆಯಾಗಿವೆ, ಯಕ್ಷ ಮತ್ತು ಸರಸ್ವತಿ ಸೇರಿದಂತೆ  ಜೈನ ತೀರ್ಥಂಕರರ ಹಲವು ಕಲಾಕೃತಿಗಳು ಪತ್ತೆಯಾಗಿವೆ.ಅವುಗಳಲ್ಲಿ ಹಲವು ಮುರಿದಿವೆ.
ಕಳೆದ ಮೂರು ತಿಂಗಳಿಂದ ದೇವಾಲಯದ ಬಳಿ ಸೋಮನಾಥ ಬಿಳೇಕುದ್ರಿ ಎಂಬುವರು ಮನೆ ನಿರ್ಮಿಸುತ್ತಿದ್ದು, ಕೆಲಸ ಮಾಡುವಾಗ ಕಾರ್ಮಿಕರಿಗೆ ಕಲ್ಲು ಸಿಕ್ಕಿತ್ತು, ಅದು ದೇವಾಲಯ ಮಾದರಿಯ ವಿಗ್ರಹವಾಗಿತ್ತು, ಅದರ ಮೇಲಿದ್ದ ಮಣ್ಣನ್ನು ತೊಳೆದ ಮೇಲೆ ತಿಳಿಯಿತು, ಅದೊಂದು ಕಲಾಕೃತಿ ಎಂದು ತಿಳಿಸಿದ್ದಾರೆ. ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದಾಗ ಅವರು ಆರು ಅಡಿ ಆಳದ ತೋಡಿದಾಗ ಮತ್ತಷ್ಟು ಕಲಾಕೃತಿಗಳು ಸಿಕ್ಕವು, ನಂತರ ಈ ವಿಷಯವನ್ನು ಪ್ರಾಚ್ಯ ಸಂಶೋಧನಾ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಯಿತು ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment