ರಾಷ್ಟ್ರ ಸುದ್ದಿ

ಗಯಾ: ಬಿಹಾರದಲ್ಲಿ ನಕ್ಸಲರ ಅಟ್ಟಹಾಸ, ಡೈನಾಮೆಟ್ ಸ್ಫೋಟಿಸಿ ಬಿಜೆಪಿ ಮುಖಂಡನ ಮನೆ ಧ್ವಂಸ

ಗಯಾ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಬಿಹಾರದಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದ ಮಾವೋವಾದಿಗಳು ಬಿಜೆಪಿ ಮುಖಂಡನ ಮನೆಯನ್ನೇ ಸ್ಫೋಟಿಸಿದ್ದಾರೆ. ಬಿಹಾರದ ದುಮಾರಿಯಾದಲ್ಲಿ ಈ ಘಟನೆ ನಡೆದಿದ್ದು, ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿರುವ ನಕ್ಸಲೀಯರು ಬುಧವಾರ ತಡರಾತ್ರಿ ಡೈನಾಮೈ ಟ್ ಸ್ಫೋಟಗೊಳಿಸಿ ಬಿಜೆಪಿ ಮುಖಂಡ ಅಂಜು ಕುಮಾರ್ ಸಿಂಗ್ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಮನೆಯ ಎದುರುಭಾಗದ ಗೋಡೆ ಒಡೆದು ಛಿದ್ರವಾಗಿ ಹೋಗಿದೆ.
ಅಂತೆಯೇ ಬಿಜೆಪಿ ಮುಖಂಡ ಅಂಜು ಕುಮಾರ್ ಗಾಯಗೊಂಡಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ವಿವರಿಸಿದೆ. ಡೈನಾಮೆಟ್ ಸ್ಫೋಟಗೊಂಡು ಮನೆ ಧ್ವಂಸಗೊಂಡ ನಂತರ ಮನೆಯ ಗೋಡೆಗೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲೇ ಬೇಕೆಂಬ ಪೋಸ್ಟರ್ ಅನ್ನು ಮಾವೋವಾದಿಗಳು ಅಂಟಿಸಿದ್ದಾರೆ. ಘಟನೆ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment