ರಾಜ್ಯ ಸುದ್ದಿ

ಗಿಡ ಬೆಳೆಸಿ, ಅಂಕ ಗಳಿಸಿ! ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಲು ಅರಣ್ಯ ಇಲಾಖೆ ಹೊಸ ಯೋಜನೆ

ಬೆಂಗಳೂರು: ವಿದ್ಯಾರ್ಥಿಗಳೇ ಗಿಡ ಬೆಳೆಸಿ, ಅಂಕ ಗಳಿಸಿ! ಹೌದು ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸರು ಕರ್ನಾಟಕ ಅರಣ್ಯ ಇಲಾಖೆ ಹಾಕಿಕೊಂಡಿರುವ ವಿನೂತನ ಯೋಜನೆ ಇದು. ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಗಿಡ ನೆಟ್ಟು ಪೋಷಣೆ ಮಾಡಿದ್ದಾದರೆ ಅವರಿಗೆ ಕೃಪಾಂಕ (ಗ್ರೇಸ್ ಮಾರ್ಕ್) ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ದಿನ ದಿನಕ್ಕೆ ಪರಿಸರ ನಾಶ ವಿಪರೀತವಾಗುತ್ತಿದ್ದು ಮಾಲಿನ್ಯ ಪ್ರಮಾಣ ಏರಿಕೆ ಯಾಗುತ್ತಿರುವುಅ ಕಾರಣ ಇಂದಿನ ಮಕ್ಕಳಲ್ಲಿ ಗಿಡ, ಮರಗಳ ಬಗೆಗೆ ಒಅಲವು ಮೂಡಿಸಿ ಪ್ರಕೃತಿ ಪ್ರೇಮ ಬೆಳೆಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಅರಣ್ಯ ಖಾತೆ ಸಚಿವ ಆರ್. ಶಂಕರ್ ಹೇಳಿದ್ದಾರೆ. ಉತ್ತಮವಾಗಿ ಗಿಡಗಳನ್ನು ಸಲುಹಿದ ವಿದ್ಯಾರ್ಥಿಗೆ ಗರಿಷ್ಠ 10 ಅಂಕಗಳನ್ನು ನೀಡುವ ಸಂಬಂಧದ ಪ್ರಸ್ತಾವನೆ ನೀಡಲು ಅರಣ್ಯ ಇಲಾಖೆ ಯೋಚಿಸುತ್ತಿದೆ.
ಪ್ರಸ್ತಾವನೆಯಲ್ಲಿರುವಂತೆ ಎಂಟನೇ ತರಗತಿಯ ವಿದ್ಯಾರ್ಥಿ ತನ್ನ ಶಾಲೆ, ಮನೆಯ ಆವರಣದಲ್ಲಾಗಲೀ ಅಥವಾ ರಸ್ತೆ ಬದಿಯಲ್ಲಾಗಲಿ ಗಿಡ ನೆಡಬೇಕು.ಇದಕ್ಕೆ ಬೇಕಾದ ಮಾವು, ಹಲಸು, ತೇಗ ಸೇರಿ ವಿವಿಧ ನಮೂನೆಯ ಹತ್ತು ಗಿಡಗಳನ್ನು ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯೇ ನಿಡಲಿದೆ. ಮೂರು ವರ್ಷ ಎಂದರೆ ವಿದ್ಯಾರ್ಥಿ ಹತ್ತನೇ ತರಗತಿ ಮುಗಿಸುವವರೆಗೆ ಆ ಗಿಡಗಳನ್ನು ಪೋಷಿಸಲುಬೇಕು. ಅಂತಿಮವಾಗಿ ಇಲಾಖೆ ವಿದ್ಯಾರ್ಥಿ ಸಲಹಿದ ಗಿಡದ ಪರಿಶೀಲನೆ ನಡೆಸಿ ಅದರ ಬೆಳವಣಿಗೆ ಆಧಾರದಲ್ಲಿ ಅಂಕವನ್ನು ನೀಡಲಿದೆ.ಈ ಅಂಕಗಳನ್ನು ಎಸ್ಎಸ್​ಎಲ್​​ಸಿ ಅಂಕಪಟ್ಟಿಯಲ್ಲಿ ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment