ದೇಶ ವಿದೇಶ

ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ದಿನದಂದು ಆರ್‌ಬಿಐನಿಂದ 350 ರೂ. ಮುಖಬೆಲೆಯ ವಿಶೇಷ ನಾಣ್ಯ

ದಿಲ್ಲಿ :  ಸಿಖ್ ಧರ್ಮದ 10ನೇ ಗುರುವಾಗಿರುವ  ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ವಾರ್ಷಿಕೋತ್ಸವದ ಗೌರವ ಸೂಚಕವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 350 ರೂ. ಮುಖಬೆಲೆಯ ವಿಶೇಷ ನಾಣ್ಯವನ್ನು ಹೊರತಂದಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ನೂತನ 350 ರೂ.ಗಳ ನಾಣ್ಯವು ಸೀಮಿತ ಸಂಖ್ಯೆಯಲ್ಲಿ ಮಾತ್ರ ಚಲಾವಣೆಯಾಗಲಿದೆ. ನಾಣ್ಯದ ಸುತ್ತಳತೆ 44 ಮಿಲ್ಲಿಮೀಟರ್ ಆಗಿದ್ದು, ಶೇಕಡಾ 50ರಷ್ಟು ಬೆಳ್ಳಿ, ಶೇ. 40ರಷ್ಟು ತಾಮ್ರ, ಶೇ. 05ರಷ್ಟು ನಿಕಲ್ ಹಾಗೂ ಶೇ.05ರಷ್ಟು ಸತು ಮಿಶ್ರಣವಾಗಿರಲಿದೆ.

34.65 ಗ್ರಾಂನಿಂದ 35.35 ಗ್ರಾಂ ಭಾರದ 350 ರೂ. ನಾಣ್ಯದ ಮುಂಭಾಗವು ‘ಅಶೋಕ ಸ್ತಂಭ’ದಿಂದ ಕಂಗೊಳಿಸಲಿದೆ. ಇದರ ಕೆಳಗಡೆಯಾಗಿ ‘ಸತ್ಯಮೇವ ಜಯತೇ’ ಉಲ್ಲೇಖಿಸಿರುತ್ತದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

 

About the author

ಕನ್ನಡ ಟುಡೆ

Leave a Comment