ಸುದ್ದಿ

ಗೂಗಲ್‌ ಪರೀಕ್ಷೆ ಮೊಬೈಲ್‌ ನಲ್ಲೇ ಬರೆದ ಮಂಗಳೂರು ವಿದ್ಯಾರ್ಥಿ

ಮಂಗಳೂರು: ಗೂಗಲ್‌ ಸಂಸ್ಥೆ ನಡೆಸಿದ ಆನ್‌ಲೈನ್‌ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ಪೂರ್ಣಗೊಳಿಸಿದ ಮಂಗಳೂರಿನ ಕಾಲೇಜು ವಿದ್ಯಾರ್ಥಿಯೊಬ್ಬರನ್ನು ಗೂಗಲ್‌ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಿದೆ. ಈ ವಿದ್ಯಾರ್ಥಿ ಮೊಬೈಲ್‌ ಮೂಲಕವೇ ಪರೀಕ್ಷೆ ಬರೆದಿರುವುದು ವಿಶೇಷ.

ನಗರದ ಸಂತ ಅಲೋಶಿಯಸ್‌ ಕಾಲೇಜಿನ ಬಿಬಿಎ ವಿದ್ಯಾರ್ಥಿ ಮೂಸಾ ಫಾಝಿಲ್‌ ಗೂಗಲ್‌ನಿಂದ ಪ್ರಮಾಣಪತ್ರ ಪಡೆದವರು. ಒಟ್ಟು 106 ಪಾಠಗಳನ್ನು ಹೊಂದಿರುವ ‘ಆನ್‌ಲೈನ್‌ ಮಾರ್ಕೆಟಿಂಗ್‌ ಫಂಡಮೆಂಟಲ್‌ ಕ್ವಾಲಿಫಿಕೇಶನ್‌’ ಪರೀಕ್ಷೆ ಇದಾಗಿದೆ. ಮೂಸಾ ಫಾಝಿಲ್‌ ಅವರು ನಿರಂತರ ಎರಡು ದಿನಗಳ ಕಾಲ ಪರೀಕ್ಷೆ ಎದುರಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಗೂಗಲ್‌ ಡಿಜಿಟಲ್‌ ಆಲ್‌ ಲಾಕ್ಡ್ನ ಬ್ಯಾಚ್‌ಗಳನ್ನು ಯಶಸ್ವಿಯಾಗಿ ಅನ್‌ಲಾಕ್‌ ಮಾಡಿ, ಗೂಗಲ್‌ ಡಿಜಿಟಲ್‌ ಅನ್‌ ಲಾಕ್ಡ್ ಅಂತಿಮ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಿ ಈ ಪ್ರಮಾಣಪತ್ರ ಗಳಿಸಿದ್ದಾರೆ.

ಮಾರ್ಕೆಟಿಂಗ್‌ ಫಂಡಮೆಂಟಲ್‌ನ ಸರ್ಚ್‌, ಇಮೇಲ್‌, ಸೋಶಿಯಲ್‌ ಮೀಡಿಯಾ, ಡಿಸ್‌ಪ್ಲೇ, ವೀಡಿಯೋ, ಇ-ಕಾಮರ್ಸ್‌, ಜಿಇಒ ಟಾರ್ಗೆಟಿಂಗ್‌ ಆ್ಯಂಡ್‌ ಎನಾಲಿಟಿಕ್ಸ್‌ನ 23 ಮೊಡ್ಯುಲ್‌ಗ‌ಳನ್ನು ಗೂಗಲ್‌ ಡಿಜಿಟಲ್‌ ಅನ್‌ಲಾಕ್ಡ್ ಕೋರ್ಸ್‌ ಒಳಗೊಂಡಿದೆ. ಫಾಝಿಲ್‌ ಅವರು ಫಾಝಿಲ್‌ ಕ್ರಿಯೇಶನ್ಸ್‌  ಗ್ರಾಫಿಕ್‌ ಡಿಸೈನ್‌ ಸಂಸ್ಥೆಯ ಸಿಇಒ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

About the author

ಕನ್ನಡ ಟುಡೆ

Leave a Comment