ರಾಜಕೀಯ

ಗೃಹ ಖಾತೆ ಪರಂ ಬಳಿಯಿಂದ ವಾಪಸ್‌ ಪಡೆದಿದ್ದು ಸರಿಯಲ್ಲ: ಸಚಿವ ರೇವಣ್ಣ ಕಿಡಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಮೈತ್ರಿ ಸರ್ಕಾರದಲ್ಲೂ ಅಸಮಾಧಾನ ಕಾಣಿಸಿಕೊಂಡಿರುವುದು ಸಚಿವ ಎಚ್‌.ಡಿ.ರೇವಣ್ಣ ಅವರ ಹೇಳಿಕೆಯಿಂದ ಸಾಬೀತಾಗಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರೇವಣ್ಣ ‘ಗೃಹ ಖಾತೆಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಬಳಿಯಿಂದ ವಾಪಾಸ್‌ ಪಡೆದಿದ್ದು ಸರಿಯಲ್ಲ. ಅವರು ದಲಿತ ನಾಯಕ. ಪರಿಶಿಷ್ಟ ಜಾತಿಯವರು ಡಿಸಿಎಂ ಆಗಿರುವುದು ಕಾಂಗ್ರೆಸ್‌ ನಾಯಕರಿಗೇ ಸಹಿಸಲು ಆಗುತ್ತಿಲ್ಲ’ ಎಂದರು.

‘ಗೃಹ ಇಲಾಖೆ ವರ್ಗಾವಣೆ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಈ ರೀತಿ ಆರೋಪ ಮಾಡಿಯೇ ಕಾಂಗ್ರೆಸ್‌ ನಾಯಕರು ಈ ಸ್ಥಿತಿಗೆ ಬಂದಿದ್ದಾರೆ. ನಾನೇನು ಮಾಡಲು ಆಗುತ್ತದೆ. ಕಾಂಗ್ರೆಸ್‌ ನಾಯಕರು ಹೀಗೆ ಸಂಚು ಮಾಡಲು ಹೋದರೆ ಏಟು ತಿನ್ನುವ ಕಾಲ ಬರುತ್ತದೆ’ ಎಂದು ಕಿಡಿ ಕಾರಿದರು.

 

About the author

ಕನ್ನಡ ಟುಡೆ

Leave a Comment