ಕ್ರೀಡೆ

ಗೆದ್ದ ಚಿನ್ನದ ಪದಕವನ್ನು ಅಭಿನಂದನ್ ಗೆ ಸಮರ್ಪಿಸಿದ ಕುಸ್ತಿ ಪಟು ಭಜರಂಗ್

ನವದೆಹಲಿ: ಭಾರತದ ಪ್ರಸಿದ್ಧ ಕುಸ್ತಿ ಪಟು ಭಜರಂಗ್ ಪುನಿಯಾ ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಬಲ್ಗೆರಿಯಾ ಕುಸ್ತಿ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅವರು ತಾವು ಜಯಿಸಿದ ಈ ಚಿನ್ನದ ಪದಕವನ್ನು ಭಾರತೀಯರೆಲ್ಲರ ಮನಗೆದ್ದ ವೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಸಮರ್ಪಿಸಿದ್ದಾರೆ. ಬಲ್ಗೇರಿಯಾ ಕುಸ್ತಿ ಪಂದ್ಯಾವಳಿಯ 65 ಕೆಜಿ ವಿಭಾಗದಲ್ಲಿ ಭಾರತದ ಭಜರಂಗ್ ಅಮೆರಿಕಾದ ಜೋರ್ಡನ್ ಒಲಿವೇರ್ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.”ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ನಿಂದ ಸುರಕ್ಷಿತ ಆಗಿ ಭಾರತಕ್ಕೆ ಮರಳಿದ್ದಾರೆ. ಭಾರತದ ಕೆಚ್ಚೆದೆಯ ಈ ವೀರಯೋಧನ ಸ್ಪೂರ್ತಿಯಿಂದಲೇ ನಾನಿಂದು ಚಿನ್ನದ ಪದಕ ಗೆದ್ದಿದೇನೆ. ಹೀಗಾಗಿ ನಾನಿದನ್ನು ಅವರಿಗೆ ಸರ್ಪಿಸಲು ಬಯಸಿದ್ದೇನೆ ” ಎಂದು ಅವರು ಹೇಳಿದ್ದಾರೆ. ಅಲ್ಲದೆ “ಅಭಿನಂದನ್ ಅವರ ದೇಶಸೇವೆಗೆ ಯಾವ ಎಣೆಯಿಲ್ಲ. ಅವರನ್ನು ನಾನೂ ಸಹ ಒಮ್ಮೆ ಭೇಟಿಯಾಗಬೇಕು, ಕೈ ಕುಲಕಬೇಕು ಎನ್ನುವುದು ನನ್ನ ಬಯಕೆ” ಎಂದೆನ್ನುವ ಮೂಲಕ ಭಜರಂಗ್ ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ. ಭಜರಂಗ್ ಪುನಿಯಾ ಒಲಂಪಿಕ್, ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ದೇಶದ ಹೆಮ್ಮೆಯ ಕ್ರೀಡಾಪಟು ಎನಿಸಿದ್ದಾರೆ.

About the author

ಕನ್ನಡ ಟುಡೆ

Leave a Comment