ರಾಜ್ಯ ಸುದ್ದಿ

ಗೋದಾಮು ಛಾವಣಿ ಕುಸಿತ, ಕೆಲ ಕಾರ್ಮಿಕರು ಸಿಲುಕಿರುವ ಶಂಕೆ

ಬೆಂಗಳೂರು: ಲಾಜಿಸ್ಟಿಕ್ ಕಂಪನಿಯ ಗೋದಾಮಿನಲ್ಲಿ ಬಟ್ಟೆ, ಆಹಾರ ವಸ್ತುಗಳನ್ನು ತುಂಬಿಸಿ ಇಟ್ಟಿದ್ದ ಕಬ್ಬಿಣದ ಛಾವಣಿ ಕುಸಿದು ಬಿದ್ದ ಪರಿಣಾಮ ಹಲವು ಕಾರ್ಮಿಕರು ಸಿಲುಕಿಕೊಂಡಿರುವ ಘಟನೆ ಆಡುಗೋಡಿಯ ಶೀಗೆಹಳ್ಳಿ ಗೇಟ್ ಬಳಿ ನಡೆದಿದೆ. ಘಟನೆಯಲ್ಲಿ ಐವರು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಉಳಿದ ಕಾರ್ಮಿಕರ ರಕ್ಷಣೆಗೆ ಭರದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಾಡುಗೋಡಿ ಸಮೀಪದ ಶೀಗೆಹಳ್ಳಿ ಗೇಟ್ ಸಮೀಪದ ಹೋಲ್ ಸೇಲ್ ಗೋದಾಮಿನ ಒಳಭಾಗದಲ್ಲಿದ್ದ ರಾಕ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ಕಾರ್ಮಿಕರು ರಾಕ್ ನಡಿ ಸಿಲುಕಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ, ಎನ್ ಡಿಆರ್ ಎಫ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಐವರು ಕಾರ್ಮಿಕರನ್ನು ರಕ್ಷಿಸಿದ್ದಾರೆ.

ಇನ್ನೂ ನಾಲ್ಕೈದು ಮಂದಿ ಕಾರ್ಮಿಕರು ರಾಕ್ ನಡಿ ಸಿಲುಕಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಅವರನ್ನೆಲ್ಲಾ ರಕ್ಷಿಸಲು ಭರದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

 

About the author

ಕನ್ನಡ ಟುಡೆ

Leave a Comment