ರಾಜಕೀಯ

ಗೋ ಮಾಂಸ ತಿನ್ನಬೇಕು ಅನ್ನಿಸಿದ್ರೆ ತಿಂತಿನಿ ಅದನ್ನ ಕೇಳೋಕೆ ನೀವ್ಯಾರು

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಗೋಹತ್ಯೆ ಬಗ್ಗೆ ಪರವಿರೋಧ ಚರ್ಚೆಯಲ್ಲಿ ಮಾತನಾಡಿದ ಅವರು,

ನಾನು ಯಾವತ್ತು ಗೋಮಾಂಸ ಸೇವಿಸಿಲ್ಲ. ತಿನ್ನಬೇಕು ಅಂದ್ರೆ ತಿನ್ನುತ್ತೇನೆ. ಅದನ್ನು ಕೇಳಲು ನೀವು ಯಾರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಂಬೇಡ್ಕರ್‌ ನಮ್ಮ ದೇಶಕ್ಕೆ ಲಿಖಿತ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ಜಾರಿ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದರು. ದೇಶದಲ್ಲಿ ವೈರುಧ್ಯ ಇರುವ ಘಟ್ಟಕ್ಕೆ ಹೋಗುತ್ತಿದ್ದೇವೆ. ದೇಶದ ಆರ್ಥಿಕ, ಸಾಮಾಜಿಕ ಅಸಮಾನತೆ ತೊಲಗಿಸದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂದು ಹೇಳಿದ್ದರು. ಅಸಮಾನತೆ ಅನುಭವಿಸುವವರಿಗೆ ನ್ಯಾಯ ಒದಗಿಸಬೇಕು ಎಂದು ಅಂಬೇಡ್ಕರ್‌ ಹೇಳಿದ್ದರು ಎಂದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾವಣೆಗೆ ಆಗ್ರಹ ಪಡಿಸುತ್ತಿವೆ. ಸಮಾಜದ ಬದಲಾವಣೆಗೆ ಸಂವಿಧಾನ ಬದಲಾಯಿಸಬೇಕು ಅಂದರೆ ಒಪ್ಪಿಕೊಳ್ಳಬಹುದು ಆದರೆ ಅವರ ಉದ್ದೇಶ ಅದಲ್ಲ. ಕೇಂದ್ರದ ಸಚಿವರಾಗಿರುವವರು ಬಿಜೆಪಿ ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾವಣೆ ಮಾಡಲು ಎನ್ನುತ್ತಾರೆ. ಪ್ರಧಾನ ಮಂತ್ರಿಗಳಿಗೆ ಗೊತ್ತಿಲ್ಲದೆ ವೈಯಕ್ತಿಕವಾಗಿ ಈ ಮಾತು ಆಡಿದ್ದರೆ ಒಪ್ಪಬಹುದಿತ್ತು.

ಜವಾಬ್ದಾರಿಯುತ ಸಚಿವರ ಬಾಯಿಂದ ಇಂತಹ ಮಾತು ಬಂದ ತಕ್ಷಣ ಅವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ಅಮಿತ್ ಶಾ ಬಿಡಿ,,, ಅವರನ್ನು ಗಂಭೀರವಾಗಿ ನಾನು ಪರಿಗಣಿಸಲ್ಲ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment