ರಾಷ್ಟ್ರ ಸುದ್ದಿ

ಗೋವಾ: ಪ್ರಮೋದ್ ಸಾವಂತ್ ಸಂಪುಟದಿಂದ ಉಪ ಮುಖ್ಯಮಂತ್ರಿ ಧವಳಿಕರ್ ವಜಾ

ಪಣಜಿ: ಮಹತ್ವದ ರಾಜಕೀಯ ಬೆಳವಣೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಹಾರಾಷ್ಟ್ರವಾದಿ ಗೊಮಾಂತಕ ಪಕ್ಷದ(ಎಂಜಿಪಿ) ನಾಯಕ ಮತ್ತು ಉಪಮುಖ್ಯಮಂತ್ರಿ ಸುಡಿನ್ ಧವಳಿಕರ್ ಅವರನ್ನು ತಮ್ಮ ಸಂಪುಟದಿಂದ ಮಂಗಳವಾರ ವಜಾ ಮಾಡಿದ್ದಾರೆ. ಕೇವಲ ಒಂದು ವಾರದ ಹಿಂದೆಯಷ್ಟೆ ಅವರು ಸಂಪಟಕ್ಕೆ ಸೇರಿದ್ದರು. ಮುಖ್ಯಮಂತ್ರಿಯ ಶಿಫಾರಸ್ಸಿನ ಮೇರೆಗೆ ಧವಳಿಕಾರ್ ಅವರನ್ನು ರಾಜ್ಯಪಾಲ ಮೃದುಲಾ ಸಿನ್ಹಾ  ಸಂಪುಟದಿಂದ ತೆಗೆದುಹಾಕಿದ್ದಾರೆ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಧವಳಿಕಾರ್, ಎಂಜಿಪಿ ಮೇಲೆ ಚೌಕಿದಾರರುಗಳು ದೌರ್ಜನ್ಯ ಮಾಡಿದ್ದಾರೆ. ಇದಕ್ಕೆ ಜನರು ಪಾಠ ಕಲಿಸಲಿದ್ದಾರೆ ಎಂದರು. ಬಿಜೆಪಿ ಕುತಂತ್ರ ರಾಜಕಾರಣ ಮಾಡಿ ಗೋವಾ ಜನರಿಗೆ ಆಘಾತ ಉಂಟು ಮಾಡಿದೆ. ಇದಕ್ಕೆ ಅದು ತಕ್ಕ ಬೆಲೆ ತೆರಬೇಕು. ಜನತೆ ಎಲ್ಲವನ್ನು ನೋಡುತ್ತಿದ್ದಾರೆ ಎಂದರು. ಎಂ.ಜಿ.ಪಿ ಯ ಮೂವರು  ಶಾಸಕರಲ್ಲಿ ಇಬ್ಬರು ಇಂದು ಪಕ್ಷದಿಂದ ಬೇರೆಯಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ. ಮನೋಹರ್ ಅಜ್ಗಾಂಕರ್ ಮಂತ್ರಿಯಾಗಿದ್ದಾರೆ. ಗೋವಾ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಜಿಎಸ್ಐಡಿಸಿ) ಅಧ್ಯಕ್ಷರಾಗಿರುವ  ದೀಪಕ್ ಪೌಸ್ಕರ್ ಅವರು ಪ್ರಮೋದ್ ಸಾವಂತ್ ಸಂಪುಟಕ್ಕೆ ಸಂಜೆ ಸೇರಲಿದ್ದಾರೆ ಎಂದು ಹೇಳಲಾಗಿದೆ. ಇದು ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂದು  ಹೇಳಲಾಗಿದೆ.

About the author

ಕನ್ನಡ ಟುಡೆ

Leave a Comment