ರಾಷ್ಟ್ರ ಸುದ್ದಿ

ಗೋವಾ ಸಿಎಂ ಪರಿಕ್ಕರ್’ಗೆ ಕ್ಯಾನ್ಸರ್; ಬಿಜೆಪಿ ಮೊದಲ ಬಾರಿಗೆ ಒಪ್ಪಿಗೆ

ಪಣಜಿ: ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯ ಪೀಡಿತರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂದು ಇದೇ ಮೊದಲ ಬಾರಿಗೆ ಬಿಜೆಪಿ ಬಹಿರಂಗಪಡಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆಯವರು, ಪರಿಕ್ಕರ್ ಅವರು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪರಿಕ್ಕರ್ ಅವರ ಆರೋಗ್ಯ ಸ್ಥಿತಿ ಸರಿಯಿಲ್ಲ. ಇದರಲ್ಲಿ ಮುಚ್ಚಿಡುವ ವಿಚಾರಗಳಾವುದು ಇಲ್ಲ ಎಂದು ಹೇಳಿದ್ದಾರೆ. ಇದೀಗ ಅವರ ಪರಿಸ್ಥಿತಿ ನಿಮಗೆ ಗೊತ್ತಿರಬಹುದು. ಏಮ್ಸ್ ನಿಂದ ಅವರನ್ನು ಕರೆದುಕೊಂಡು ಬರಲಾಗಿದ್ದು, ಪ್ರಸ್ತುತ ಅವರು ಅವರ ನಿವಾಸದಲ್ಲಿಯೇ ಇದ್ದಾರೆ. ಪರಿಕ್ಕರ ತಮ್ಮ ಕುಟುಂಬಸ್ಥರೊಂದಿಗೆ ನೆಮ್ಮದಿಯಾಗಿರಲಿ. ಕುಟುಂಬಸ್ಥರೊಂದಿಗೆ ಕಾಲ ಕಳೆಯುವ ಹಕ್ಕು ಅವರಿಗಿದೆ. ಇದನ್ನು ಪ್ರಶ್ನಿಸುವ ಹಕ್ಕಿ ಯಾರಿಗೂ ಇಲ್ಲ ಎಂದು ತಿಳಿಸಿದ್ದಾರೆ. ಪರಿಕ್ಕರ್ ಗೈರು ಹಾಜರಿನಿಂದ ಆಡಳಿತಕ್ಕೆ ಯಾವುದೇ ಸಮಸ್ಯೆಗಳೂ ಎದುರಾಗಿಲ್ಲ. ಅಂತಹ ಸಮಸ್ಯೆಗಳಾವುದೂ ನನಗೆ ಕಾಣಿಸಿಲ್ಲ. ಹೊಸ ಯೋಜನೆಗಳಿಗೆ ಚಾನೆ ನೀಡುತ್ತಿದ್ದೇನೆ. ಹೊಸ ಯೋಜನೆಗಳನ್ನು ಆರಂಭಿಸುತ್ತೇವೆ. ಪರಿಕ್ಕರ್ ಅವರನ್ನು ಅವರ ಪಾಡಿಗೆ ಬಿಡೋಣ. ನಿನ್ನೆ ಕೂಡ ಅವರೊಂದಿಗೆ ಮಾತುಕತೆ ನಡೆಸಿದ್ದೇನೆಂದಿದ್ದಾರೆ.
ಮುಂಬೈ, ಅಮೆರಿಕಾ ಹಾಗೂ ದೆಹಲಿಯಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದು ಸದ್ಯ ಗೋವಾದ ತಮ್ಮ ನಿವಾಸದಲ್ಲಿರುವ ಪರಿಕ್ಕರ್ ಅವರಿಗೆ ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ಯಾವುದು ಎಂಬುದು ಈವರೆಗೂ ಅಧಿಕೃತವಾಗಿ ಗೊತ್ತಾಗಿರಲಿಲ್ಲ. ಈ ನಡುವೆ. ಅ.30 ರಂದು ತಮ್ಮ ನಿವಾಸದಲ್ಲೇ ಪರಿಕ್ಕರ್ ಅವರು ಹೂಡಿಕೆ ಉತ್ತೇಜನಾ ಮಂಡಳಿ ಹಾಗೂ ಅ.31ರಂದು ಸಚಿವ ಸಂಪುಟದ ಸಭೆಯನ್ನು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment