ರಾಷ್ಟ್ರ ಸುದ್ದಿ

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಗಂಭೀರ

ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ನಿನ್ನೆಯಷ್ಟೇ ವಿಶ್ವ ಕ್ಯಾನ್ಸರ್ ದಿನದ ನಿಮಿತ್ತ ಟ್ವೀಟ್ ಮಾಡಿದ್ದ ಪರಿಕ್ಕರ್, ಧೈರ್ಯ ಮತ್ತು ದೃಢ ಸಂಕಲ್ಪದಿಂದ ಯಾವುದೇ ಖಾಯಿಲೆಗಳನ್ನು ಎದುರಿಸಬಹುದು ಎಂದು ಟ್ವೀಟ್ ಮಾಡಿದ್ದರು. ಆದರೆ ಟ್ವೀಟ್ ಮಾಡಿದ ಕೇವಲ 24 ಗಂಟೆಗಳೊಳಗೆ ಪರಿಕ್ಕರ್ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗೋವಾ ಡೆಪ್ಯುಟಿ ಸ್ಪೀಕರ್ ಹಾಗೂ ಬಿಜೆಪಿ ಶಾಸಕ ಮೈಕೆಲ್ ಲೋಬೋ ಅವರು, ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿದ್ದು, ಅವರ ಪರಿಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಗುಣಪಡಿಸಲಾಗದ ಸಮಸ್ಯೆಯಿಂದ ಪರಿಕ್ಕರ್ ಬಳಲುತ್ತಿದ್ದು, ದೇವರ ಆಶೀರ್ವಾದಿಂದ ಅವರು ಅವರು ಬದುಕುತ್ತಿದ್ದಾರೆ. ಕೆಲಸ ಮಾಡಲೆಂದೇ ದೇವರು ಅವರಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿರುವ ಪರಿಕ್ಕರ್ ಗೆ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಈ ಹಿಂದೆ ಗೋವಾ ಬಜೆಟ್ ಮಂಡನೆ ವೇಳೆ ಪರಿಕ್ಕರ್ ಅನಾರೋಗ್ಯದ ನಡುವೆಯೇ ಮೂಗಿಗೆ ನಳಿಕೆಯನ್ನು ಅಳವಡಿಸಿಕೊಂಡೇ ಬಜೆಟ್ ಮಂಡಿಸಿದ್ದರು. ಅಲ್ಲದೆ ಆ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಕೂಡ ಮಾಡಿದ್ದರು.

About the author

ಕನ್ನಡ ಟುಡೆ

Leave a Comment