ರಾಜ್ಯ ಸುದ್ದಿ

ಗೌರಿ ಲಂಕೇಶ್, ಎಂಎಂ ಕಲ್ಬರ್ಗಿ ಕೊಲೆಗಳಿಗೆ ನಂಟಿದೆ: ಸುಪ್ರೀಂಗೆ ಕರ್ನಾಟಕ ಪೊಲೀಸರ ಮಾಹಿತಿ

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ ಕಲ್ಬುರ್ಗಿ ಅವರ ಕೊಲೆಗಳ ನಡುವೆ ನಂಟಿದೆ ಎಂದು ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಎರಡು ಹತ್ಯೆಗಳಲ್ಲಿ ಸಾಮ್ಯತೆ ಹಾಗೂ ನಂಟು ಇರುವ ಕಾರಣ ಮೂರು ತಿಂಗಳೊಳಗೆ ಕಲ್ಬುರ್ಗಿ ಅವರ ಹತ್ಯೆ ಸಂಬಂಧ ಚಾರ್ಜ್ ಶೀಟ್ ದಾಖಲಿಸುವುದಾಗಿ ಹೇಳಿದ್ದಾರೆ. 2015 ರಲ್ಲಿ  ಧಾರವಾಡದಲ್ಲಿ ಹತ್ಯೆಯಾದ ಎಂಎಂ ಕಲ್ಬುರ್ಗಿ ಅವರ ಪ್ರಕರಣವನ್ನು ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನವಿನ್ ಸಿನ್ಹಾ ಅವರನ್ನೊಳಗೊಂಡ ಪೀಠ  ವಿಚಾರಣೆ ನಡೆಸಿತು.
ನವೆಂಬರ್ 26 ರಂದು ಕರ್ನಾಟಕ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದ ಸುಪ್ರೀಂಕೋರ್ಟ್ ನೀವು ಏನನ್ನೂ ಮಾಡದೇ ಸುಮ್ಮನೆ ಎಳೆದಾಡುತ್ತಿದ್ದೀರಿ ಎಂದು ತನಿಖೆ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿತ್ತು, ಪ್ರಕರಣವನ್ನು ಬಾಂಬೆ ಹೈಕೋರ್ಟ್ ಗೆ ವರ್ಗಾವಯಿಸುವುದಾಗಿ ತಿಳಿಸಿತ್ತು,

About the author

ಕನ್ನಡ ಟುಡೆ

Leave a Comment