ರಾಜಕೀಯ

ಗೌರಿ ಲಂಕೇಶ್ ಹತ್ಯಾ ಆರೋಪಿ ಮೋದಿ ಮನೆಯಲ್ಲಿದ್ದರೆ?; ಎ.ಕೆ ಸುಬ್ಬಯ್ಯ

ಮೈಸೂರು: ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿದ ಆರೋಪಿ ಪ್ರಧಾನಿ ಮೋದಿ ಅವರ ಮನೆಯಲ್ಲಿ ಅಡಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾಡಲು ಸಾಧ್ಯ? ಹೀಗೆಂದು ಪ್ರಶ್ನಿಸುವ ಮೂಲಕ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಅವರು ವಿವಾದ ಸೃಷ್ಟಿಸಿದ್ದಾರೆ.

ಸಮಾರಂಭವೊಂದರಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯ ಮೋದಿ ಮನೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ. ಗೌರಿ ಕೊಲೆ ಮಾಡಿದ ವ್ಯಕ್ತಿ ಯಾರು ಅಂತ ಗೊತ್ತಿಲ್ಲ. ಆದರೆ, ಕೊಲೆ ಮಾಡಿಸಿದ ಶಕ್ತಿ ಯಾರು ಎಂಬುದು ನಮಗೆ ಗೊತ್ತಿದೆ ಎಂದರು.

ನಾನು ಜನಸಂಘದ ಅಧ್ಯಕ್ಷನಾಗಿದ್ದಾಗ ಕರ್ನಾಟಕದಲ್ಲಿ 18 ಮಂದಿ ಗೆದ್ದಿದ್ದೆವು. ಬಿಜೆಪಿಯನ್ನ ಎರಡಕ್ಕೆ ಕೂರಿಸಿದ್ದೆ! ವಿಧಾನಮಂಡಲದಲ್ಲಿ ಹಲವರು ನನ್ನನ್ನು ‘ಯು ಆರ್ ರೈಟ್ ಪರ್ಸನ್, ಯು ಆರ್ ಇನ್ ರಾಂಗ್ ಪಾರ್ಟಿ’ ಎನ್ನುತ್ತಿದ್ದರು. ಆ ಬಗ್ಗೆ ಯೋಚಿಸಿ ನಂತರ ನಡೆದ ಚುನಾವಣೆಯಲ್ಲಿ ಜನಸಂಘದವರನ್ನು 18 ರಿಂದ 2ಕ್ಕೆ ಕೂರಿಸಿ ಪಕ್ಷವನ್ನು ಛಿದ್ರ ಮಾಡಿದ್ದೆ ಎಂದು ಸುಬ್ಬಯ್ಯ ಸ್ಫೋಟಕ ‘ಸತ್ಯ’ ಬಿಚ್ಚಿಟ್ಟರು.

About the author

ಕನ್ನಡ ಟುಡೆ

Leave a Comment