ಸುದ್ದಿ

ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರಣ: ರಾಹುಲ್ ಗಾಂಧಿ

ಬೆಂಗಳೂರು; ಮಂಗಳವಾರ ರಾತ್ರಿ ಸುಮಾರು 7:30 ಕ್ಕೆ ನಡೆದ ಗೌರಿ ಲಂಕೇಶ್ ರವರ ಅಂತ್ಯಕ್ರಿಯೆ ಚಾಮರಾಜಪೇಟೆ ಲಿಂಗಾಯತ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಗೌರಿ ಲಂಕೇಶ್‌ ಸಹೋದರ ಇಂದ್ರಜಿತ್‌ ಲಂಕೇಶ್‌, ಸಹೋದರಿ ಕವಿತಾ ಲಂಕೇಶ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಉಮಾಶ್ರೀ ,ರಾಮಲಿಂಗಾರೆಡ್ಡಿ, ರಮೇಶ್‌ ಕುಮಾರ್‌,  ಲೇಖಕ ದೇವನೂರು ಮಹಾದೇವ, ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾತಾಡಿದ ರಾಹುಲ್ ಗಾಂಧಿಯವರು ಈ ಹತ್ಯೆಗೆ ಪ್ರಮುಖ ಕಾರಣ ಬಿಜೆಪಿ ಮತ್ತು ಆರ್.ಎಸ್.ಎಸ್ ಎಂದು ಆರೋಪಿಸಿದರು

ಈ ಆರೋಪದ ವಿರುದ್ದವಾಗಿ ಮಂಡ್ಯದ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿಯವರ ವಿರುದ್ದ ದೂರನ್ನು ನೀಡಿದ್ದು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಗೌರಿ ಲಂಕೇಶ್ ರವರ ಬಗ್ಗೆ ಮಾತನಾಡುವದನ್ನ ಬಿಟ್ಟು ಈ ಸಮಯದಲ್ಲೂ ರಾಜಕೀಯ ಮಾಡುವುದು ಸರಿಯೇ ಎಂದು ವಿರೋಧ ವ್ಯಕ್ತಪಡಿಸಿದರು

About the author

ಕನ್ನಡ ಟುಡೆ

1 Comment

Leave a Comment